ನ್ಯೂಸ್

ಭೂ ಮಂಜೂರಾತಿ ಪಡೆಯಲು ಆದಾಯ ಮಿತಿ ಹೆಚ್ಚಿಸಿ: ಗೃಹ ಸಚಿವ ಜ್ಞಾನೇಂದ್ರ

ಬೆಂಗಳೂರು: ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಸಾರ್ವಜನಿಕರು ಭೂ ಮಂಜೂರಾತಿ ಫಲಾನುಭವಿಗಳಾಗಿ ಅರ್ಹತೆ ಗಳಿಸಲು ಪ್ರಸ್ತುತ ಇರುವ ವಾರ್ಷಿಕ ಗರಿಷ್ಠ ಆದಾಯದ ಮಿತಿಯನ್ನು ರೂ. 30,000/- ದಿಂದ ರೂ 1,20,000/- ಕ್ಕೆ ಹೆಚ್ಚಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಪತ್ರ ಬರೆದಿದ್ದು, ಗರಿಷ್ಠ ಆದಾಯದ ಮಿತಿಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಕರ್ನಾಟಕ ಭೂ ಕಂದಾಯ ಕಾಯಿದೆ-1964 ರ ಸೆಕ್ಷನ್​ 94-ಸಿಗೆ ತಿದ್ದುಪಡಿ ತಂದು ಆದೇಶ ಹೊರಡಿಸಲು ಕೋರಿದ್ದಾರೆ. ಆಹಾರ ಇಲಾಖೆಯಲ್ಲಿ ಬಿ.ಪಿ.ಎಲ್. ಕಾರ್ಡ್ ಫಲಾನುಭವಿಗಳಾಗಲು ವಾರ್ಷಿಕ ಆದಾಯದ ಮಿತಿಯು ರೂ. 1,20,000/- ಆಗಿದೆ ಎಂದು ಸಚಿವ ಜ್ಞಾನೇಂದ್ರ ಅವರು, ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.