ನ್ಯೂಸ್

ಆರ್‌ವಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಹೊಂಬಾಳೆ ಫಿಲಂಸ್

ಬೆಂಗಳೂರು ಇಲ್ಲಿಯವರೆಗೂ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದ ಹೊಂಬಾಳೆ ಫಿಲಂಸ್ ಇದೀಗ ಶಿಕ್ಷಣ ಕ್ಷೇತ್ರಕ್ಕು ಕಾಲಿಟ್ಟಿದೆ. ಆರ್‌ವಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ’ಸ್ಕೂಲ್ ಆ್ ಫಿಲಂಸ್, ಮೀಡಿಯಾ, ಆೃಂಡ್ ಕ್ರಿಯೇಟಿವ್ ಆರ್ಟ್ಸ್’ ಅನ್ನು ಸ್ಥಾಪಿಸಿದೆ.

ಸಿನಿಮಾ, ಮಾಧ್ಯಮ ಮತ್ತು ಸೃಜನಶೀಲ ಕಲೆಗಳ ಕಾಲೇಜು ಆಗಿದೆ. (ಎಸ್‌ಓಎ್ಎಂಸಿಎ) ಈ ಸಂಬಂಧ ಆರ್‌ವಿ ವಿಶ್ವವಿದ್ಯಾಲಯ ಹಾಗೂ ಹೊಂಬಾಳೆ ಫಿಲಂಸ್ ಒಡಂಬಡಿಕೆಗೆ ಸಹಿ ಮಾಡಿವೆ.

ಈ ಸಹಭಾಗಿತ್ವದಡಿ ಸ್ಥಾಪನೆಯಾಗಲಿರುವ ಕಾಲೇಜಿನಲ್ಲಿ ಸಿನಿಮಾ, ಮಾಧ್ಯಮ, ಓಟಿಟಿ, ಸೃಜನಶೀಲ ಕಲೆಗಳಿಗೆ ಸಂಬಂಧಿಸಿದ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ವ್ಯಾಸಂಗ ಇರುತ್ತದೆ.

ಚಿತ್ರ ನಿರ್ಮಾಣ, ಆನಿಮೇಶನ್ ವಿಷುಯಲ್ ಎಫೆಕ್ಟ್, ಚಿತ್ರ ನಿರ್ದೇಶನ, ಚಿತ್ರಕಥೆ ರಚನೆ, ಸಂಕಲನ, ಸಿನಿ ಛಾಯಾಗ್ರಹಣ, ಧ್ವನಿ ಸಂರಚನೆ ಕೋರ್ಸ್‌ಗಳು ಕೂಡ ಇರುತ್ತವೆ.

ಈ ಸಹಭಾಗಿತ್ವ ಕುರಿತು ಮಾತನಾಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂಪಿ ಶ್ಯಾಮ್, ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ದೃಶ್ಯಮಾಧ್ಯಮಕ್ಕೆ ಸಂಬಂಧಿಸಿದಂತೆ ಜಾಗತಿಕ ಗುಣಮಟ್ಟದ ತರಬೇತಿ ಲಭ್ಯವಾಗಲಿದೆ. ಜತೆಗೆ, ದೇಶದ ಅತಿ ದೊಡ್ಡ ಸ್ಟುಡಿಯೋದಲ್ಲಿ ಪ್ರಾಯೋಗಿಕ ಅನುಭವವೂ ಸಿಗಲಿದೆ ಎಂದು ವಿವರಿಸಿದರು.

ಹೊಂಬಾಳೆ ಫಿಲಂಸ್ ಸಂಸ್ಥಾಪಕ ವಿಜಯ್ ಕಿರಗಂದೂರು ಮಾತನಾಡಿ, ಮುಂಬರುವ ವರ್ಷಗಳಲ್ಲಿ ದೃಶ್ಯ ಮಾಧ್ಯಮ ಹಾಗೂ ದೃಶ್ಯ ಮನೋರಂಜನೆಯ ಕ್ಷೇತ್ರಕ್ಕೆ ಅಗತ್ಯವಿರುವ ವೃತ್ತಿಪರ ಪ್ರತಿಭಾವಂತರನ್ನು ರೂಪಿಸಲು ಅನುಕೂಲವಾಗಲಿದೆ ಎಂದರು.

ಆರ್‌ವಿ ಕಾಲೇಜು ಸಹಯೋಗದಲ್ಲಿ ಚಲನಚಿತ್ರರಂಗ, ಮಾಧ್ಯಮ, ಕಲಾಕೌಶಲದ ಪದವಿ ವ್ಯಾಸಂಗವನ್ನು ಪ್ರಾರಂಭಿಸುತ್ತಿದ್ದೇವೆ. ನಿಜಕ್ಕೂ ಪ್ರತಿಭಾವಂತರಿಗೆ ಇದೊಂದು ಸುವರ್ಣಾವಕಾಶ. ಎರಡು ದಿಗ್ಗಜ ಸಂಸ್ಥೆಗಳು ಒಗ್ಗೂಡಿ ಗುಣಮಟ್ಟದ ಶಿಕ್ಷಣದ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸಲು ಮುಂದಾಗುತಿದ್ದೇವೆ. ಪ್ರತಿಭೆಗಳ ಅನಾವರಣಕ್ಕೆ ಇದೊಂದು ಮೈಲಿಗಲ್ಲು ಆಗುವುದು ನಿಶ್ಚಿತ ಎಂದು ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ. ಎಂಪಿ ಶ್ಯಾಮ್ ಹಾಗೂ ಹೊಂಬಾಳೆ ಫಿಲಂಸ್ ನಿರ್ದೇಶಕ ಚಲುವೇಗೌಡ ಅವರು ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.