ನ್ಯೂಸ್

ಹಾಕಿ ತರಬೇತಿ ಶಿಬಿರ

ಎಂ.ರವಿ

ನಾಪೋಕ್ಲು: ನಾಲ್‌ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮಾ.24 ರಿಂದ ಬಲ್ಲಮಾವಟಿ ನೇತಾಜಿ ವಿದ್ಯಾ ಸಂಸ್ಥೆ ಆಟದ ಮೈದಾನದಲ್ಲಿ ನುರಿತ ತರಬೇತುದಾರರಿಂದ ಕಿರಿಯರಿಗೆ ಹಾಕಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಿಕೊಳ್ಳಲು ಕರವಂಡ ಸುರೇಶ್ ಮೊ: 9480251850, ಚಂಗೇಟಿರ ಸೋಮಣ್ಣ ಮೊ: 9901629090 ಸಂಪರ್ಕಿಸಬಹುದು.