ನ್ಯೂಸ್

ಹಾಕಿ ಆಟಗಾರ್ತಿಯ ಕೃಷಿ ಕೆಲಸ

ನವದೆಹಲಿ: ಈ ಲಾಕ್​ಡೌನ್ ಅವಧಿಯಲ್ಲಿ ಹೆಚ್ಚಿನ ಕ್ರೀಡಾಪಟುಗಳು ಕುಟುಂಬದವರೊಡನೆ ಕಾಲ ಕಳೆಯುತ್ತಿದ್ದಾರೆ. ಮತ್ತೆ ಕೆಲವರು ಮನೆಯಲ್ಲಿದ್ದುಕೊಂಡೇ ಶಾರೀರಿಕ ಕಸರತ್ತುಗಳ ಮೂಲಕ ಫಿಟ್ ಆಗಿರಲು ಶ್ರಮಿಸುತ್ತಿದ್ದಾರೆ. ಆದರೆ ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರ್ತಿ ಪೂನಂ ರಾಣಿ ಮಲ್ಲಿಕ್ ತಮ್ಮನ್ನು ಗೋಧಿ ಬೆಳೆಯ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಹರಿಯಾಣದ ಉಮ್ರಾ ಗ್ರಾಮದ ರೈತ ಕುಟುಂಬದ ಪೂನಂ ರಾಣಿ ಭಾರತ ತಂಡದ ಪರ ಇನ್ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ಆಡಿದವರು. ಆದರೂ ಅವರು ಕೃಷಿ ಕೆಲಸವನ್ನು ಮರೆತಿಲ್ಲ.

‘ಇದೇ ಮೊದಲ ಸಲ ಗದ್ದೆಗೆ ಗೋಧಿ ಕೊಯ್ಲಿಗೆ ಬಂದಿದ್ದೇನೆ. ಈ ಲಾಕ್​ಡೌನ್ ಸಂದರ್ಭದಲ್ಲಿ ರೈತರು ಅಪರಿಚಿತ ಕಾರ್ವಿುಕರಿಗೆ ಕೆಲಸ ಕೊಡಲು ಹಿಂಜರಿಯುತ್ತಿದ್ದಾರೆ. ಇನ್ನು ಕೆಲವು ಕಾರ್ವಿುಕರು ತಮ್ಮ ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ಹೀಗಾಗಿ ನಾನು ಗದ್ದೆಗೆ ತೆರಳಿ ಕುಟುಂಬದ ಸದ್ಯರೊಡನೆ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ ಪೂನಂ.