ಶ್ರೀನಗರ: ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ರಿಯಾಜ್ ನಾಯ್ಕೂ ಹತ್ಯೆ ಬಳಿಕ ಉಗ್ರ ಸೈುಲ್ಲಾನನ್ನು ಈ ಸ್ಥಾನಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ವೈದ್ಯ ಸಹಾಯಕನಾಗಿದ್ದ ಸೈುಲ್ಲಾ ‘ಎ ಪ್ಲಸ್ ಪ್ಲಸ್’ ದರ್ಜೆಯ ಉಗ್ರನಾಗಿದ್ದು, ಅನೇಕ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಈತನ ಸುಳಿವು ನೀಡಿದವರಿಗೆ ಸರ್ಕಾರ ₹ 12 ಲಕ್ಷದ ಇನಾಮು ಕೂಡ ಘೋಷಿಸಿದೆ.
ಪುಲ್ವಾಮದಲ್ಲಿ ಉಗ್ರರಿಗೆ ಗೈಡ್ ಆಗಿ ಭಯೋತ್ಪಾದಕ ಜಗತ್ತನ್ನು ಪ್ರವೇಶಿಸಿದ ಸೈುಲ್ಲಾ, ನಂತರ ತ್ರಾಲ್, ಕಾಕಪೋರ್, ಕುಲ್ಗಾಮ್ ಮತ್ತು ಶ್ರೀನಗರದಲ್ಲೂ ಕಾರ್ಯನಿರ್ವಹಿಸಿದ್ದಾನೆ. ದಕ್ಷಿಣ ಕಾಶ್ಮೀರದಲ್ಲಿ ಸಕ್ರಿಯನಾಗಿ, ಹೆಚ್ಚು ಹೆಚ್ಚು ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡುವ ಉದ್ದೇಶ ಸೈುಲ್ಲಾಗೆ ಇದೆ ಎನ್ನಲಾಗಿದೆ.
ಬುಹ್ರಾನ್ ವಾನಿ ಮತ್ತು ಆತನ 12 ಉಗ್ರರು ನೆಲೆಸಿದ್ದ ಮಲಾಂಗ್‌ಪೋರ್ ಮತ್ತು ಪುಲ್ವಾಮಾದಲ್ಲೇ ಯುವಕರನ್ನು ಸಂಘಟಿಸುವುದಾಗಿ ಸೈುಲ್ಲಾ ತಿಳಿಸಿದ್ದಾನೆ.