ನ್ಯೂಸ್

ಹಿಟ್ & ಡ್ರ್ಯಾಗ್​​​; ವ್ಯಕ್ತಿಯನ್ನು 10 ಮೀ. ಎಳೆದೋಯ್ದ ಚಾಲಕ! ಪೊಲೀಸರು ಸತ್ಯ ಬೇಧಿಸಿದ್ದೆ ರೋಚಕ

ನವದೆಹಲಿ: ಕಾರೊಂದು ಡಿಕ್ಕಿ ಹೊಡೆದು ಸುಮಾರು 10 ಮೀಟರ್​​​ವರೆಗೆ ಎಳೆದೊಯ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕನ್ನಾಟ್ ಪ್ಲೇಸ್​​​ನಲ್ಲಿ ನಡೆದಿದೆ. ಘಟನೆಯ ನಂತರ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಮರುದಿನ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ (ಸೆಪ್ಟೆಂಬರ್​​ 7) ತಿಳಿಸಿದ್ದಾರೆ.

ಕಾರು ಡಿಕ್ಕಿ ಹೊಡೆದ ನಂತರ ನಲವತ್ತೈದು ವರ್ಷದ ಲೇಖ್ರಾಜ್​​ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಲೇಖ್ರಾಜ್​​ ಅವರು ಫುಟ್​ಪಾತ್​ ಮೇಲೆ ವಾಸಿಸುತ್ತಿದ್ದ ನಿರಾಶ್ರಿತರಾಗಿದ್ದಾರೆ. ಕನ್ನಾಟ್ ಪ್ಲೇಸ್‌ನ ಔಟರ್ ಸರ್ಕಲ್‌ನ ಬಾರಾಖಂಬಾ ರಸ್ತೆಯ ಬಳಿ ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ವ್ಯಕ್ತಿಯೊಬ್ಬರು ಕಾರಿನಡಿ ಸಿಲುಕಿದ್ದರು ದುಬೆ ಡ್ರೈವಿಂಗ್​ ನಿಲ್ಲಿಸದೆ ಮುಂದವರಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ಸುಮಾರು 10 ಮೀಟರ್​ ಎಳೆದೊಯ್ದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಚಾಲಕನನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪತ್ತೆಹಚ್ಚಲಾಗಿದೆ. ಚಾಲಕನನ್ನು ಮಧ್ಯಪ್ರದೇಶ ಮೂಲದ ಶಿವಂ ದುಬೆ (28) ಎಂದು ಕಂಡುಹಿಡಿಯಲಾಯಿತು. ಮಧ್ಯಪ್ರದೇಶ ಮೂಲದವನಾದ ದುಬೆ ಬುಧವಾರ ದಕ್ಷಿಣ ದೆಹಲಿಯ ಮಹಿಪಾಲ್‌ಪುರದಲ್ಲಿ ವಾಸಿಸಿರುವ ಸ್ನೇಹಿತನಿಂದ ಕಾರು ಪಡದು ಯಾರನ್ನೋ ಭೇಟಿಯಾಗಲು ಕನ್ನಾಟ್​ ಪ್ಲೇಸ್​ಗೆ ಹೋಗಿದ್ದಾಗಿ ತನಿಖೆಯಲ್ಲಿ ತಿಳಿದಿದೆ ಎಂದು ಪೊಲೀಸರು ತಿಳಿಸಿದರು.

ಘಟನೆ ಬಳಿಕ ಏನೂ ಆಗಿಲ್ಲ ಎಂಬಂತೆ ಕಾರನ್ನು ತನ್ನ ಸ್ನೇಹಿತನಿಗೆ ಹಿಂತಿರುಗಿಸಿದ್ದಾನೆ. ಸಿಸಿಟಿವಿ ಪರಿಶೀಲನೆ ಬಳಿಕ ಕಾರಿನ ಮಾಲೀಕನನ್ನು ಗುರಿಸಲಾಯಿತು. ಬಳಿಕ ಪಡೆದ ಮಾಹಿತಿಯಿಂದ ಕಾರನ್ನು ಜಪ್ತಿ ಮಾಡಿ, ದುಬೆಯನ್ನು ಬಂಧಿಸಿ ಭಾರತೀಯ ನ್ಯಾಯಸಂಹಿತೆ ಸಂಬಂಧಿತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್​​)