ನ್ಯೂಸ್

ಬೀದಿಗೆ ಬಂದ್ರೆ ನೀನು; ನಿನ್ನ ಮನೆಗೆ ಬರವೆ ನಾನು

ಹಿರಿಯೂರು: ತಾಲೂಕಿನ ಧರ್ಮಪುರ ರಸ್ತೆ ಮಧ್ಯೆ ಕರೊನಾ ವೈರಸ್ ಜಾಗೃತಿ ಬರಹದ (ಚಿತ್ರ) ಸಾರ್ವಜನಿಕರು ಮೆಚ್ಚುಗೆಗೆ ಪಾತ್ರವಾಯಿತು.

ಅಬ್ಬಿನಹೊಳೆ ಪೊಲೀಸರು ಹಾಗೂ ಆರೋಗ್ಯ-ಕಂದಾಯ ಇಲಾಖೆ ಸಿಬ್ಬಂದಿ ಹೋಬಳಿಯ 56 ಹಳ್ಳಿಗರಲ್ಲಿ ಕರೊನಾ ವೈರಸ್ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಿದ್ದರೂ, ಬೈಕ್‌ಗಳ ಸಂಚಾರ ನಿಯಂತ್ರಣಕ್ಕೆ ಬಂದಿರಲಿಲ್ಲ.

ಹೀಗಾಗಿ ಸ್ಥಳೀಯರ ಸಹಕಾರದೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ‘ಬೀದಿಗೆ ಬಂದರೆ ನೀನು; ನಿನ್ನ ಮನೆಗೆ ಬರುವೆ ನಾನು’ ಎಂಬ ಬರಹದ ಮೂಲಕ ಜನರಲ್ಲಿ ಕರೊನಾ ವೈರಸ್ ಅಪಾಯ ಕುರಿತು ಅರಿವು ಮೂಡಿಸಲಾಯಿತು.

ದೇಶದ ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದು, ಕರೊನಾ ಯುದ್ಧ ಗೆಲ್ಲಲು ಜನರ ಸಹಕಾರ ಅಗತ್ಯ. ವಿನಾಕಾರಣ ಮನೆಯಿಂದ ಹೊರ ಬರದಂತೆ ಪೊಲೀಸರು ಮನವಿ ಮಾಡಿದರು. ಪೊಲೀಸರ ವಿನೂತನ ಜಾಗೃತಿ ಕಾರ್ಯಕ್ಕೆ ಸ್ಥಳೀಯ ಯುವಕರು ಸಾತ್ ನೀಡಿದರು.

25 ಬೈಕ್ ವಶ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಸುತ್ತಾಡುತ್ತಿದ್ದ 25 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.