ನ್ಯೂಸ್

ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲೇ ಹೃದಯಾಘಾತ: ಶ್ರೀ ವೀರಮಹಾಂತ ಸ್ವಾಮೀಜಿ ನಿಧನ

ಯಾದಗಿರಿ: ಶಹಾಪುರ ತಾಲೂಕಿನ‌ ಹಿರೇಮಠದ ಶ್ರೀ ವೀರಮಹಾಂತ ಸ್ವಾಮೀಜಿ(48) ಹೃದಯಾಘಾತದಿಂದ ನಿಧನರಾದರು.

ಫೆಬ್ರವರಿ ತಿಂಗಳಲ್ಲಿ ಶ್ರೀಗಳ ಪಟ್ಟಾಧಿಕಾರ ನಿಮಿತ್ತ ಕಾರ್ಯಕ್ರಮದ ಆಹ್ವಾನ ನೀಡಲು ಬೆಂಗಳೂರಿಗೆ ಶ್ರೀಗಳು ತೆರಳಿದ್ದರು. ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಸಂಜೆ ಉದ್ಯಾನ ರೈಲಿಗೆ ಕಾಯುವ ವೇಳೆ ಎದೆನೋವಿನಿಂದ ಶ್ರೀಗಳು ಕುಸಿದು ಬಿದ್ದಿದ್ದಾರೆ. ಶ್ರೀಗಳ ಜತೆಯಲ್ಲಿದ್ದ ಭಕ್ತರು ಗುರುಗಳನ್ನ ಉಳಿಸಿಕೊಳ್ಳಲು ಯತ್ನಿಸಿದ್ದರಾದರೂ ಸಾಧ್ಯವಾಗಲಿಲ್ಲ. ರಾತ್ರಿ 9.10ಕ್ಕೆ ಶ್ರೀಗಳು ಇಹಲೋಕ ತ್ಯಜಿಸಿದರು.