ನ್ಯೂಸ್

ಅಡುಗೆ ಎಣ್ಣೆ ಕಳ್ಳರ ಬಂಧನ


ಬೆಳಗಾವಿ: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ಅಡುಗೆ ಎಣ್ಣೆ  ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಮಂಗಳವಾರ ಇಬ್ಬರು ಬಂಧಿಸಿ,  24.23 ಲಕ್ಷ ರೂ. ಮೌಲ್ಯದ ಅಡುಗೆ ಎಣ್ಣೆ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಆಸ್ಸಾಂ ರಾಜ್ಯದ ಮೂಲದ ಇಬ್ರಾಹಿಂ ಅಬ್ದುಲ್‌ಮಜಿದ  ಅಲಿ, ಸಾಹೇಬಅಲಿ ಹುಸೇನ ಬಂಧಿತರು.
ಲಾರಿ ಮೂಲಕ ಮಂಗಳೂರಿನಿಂದ ಬೆಳಗಾವಿ, ನಿಪ್ಪಾಣಿ ಕಡೆಗೆ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ  ಹಿರೇಬಾಗೇವಾಡಿ ಸಮೀಪದ ಬಡೇಕೊಳ್ಳ ಘಾಟ್‌ನಲ್ಲಿ ಟ್ರಕ್ ನಿಲ್ಲಿಸಿ  30,38,276 ರೂ. ಮೌಲ್ಯದ ಅಡುಗೆ ಎಣ್ಣೆ ಬಾಕ್ಸ್ ಮತ್ತು ಟೀನ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಎಸಿಪಿ ಗೋಪಾಲಕೃಷ್ಣ ಗೌಡ, ಪಿಐ ಅಮರೇಶ ಪಿ. ಹಾಗೂ ಸಿಬ್ಬಂದಿ ತಂಡವು  ಆರೋಪಿತರನ್ನು ಬಂಧಿಸಿದ್ದಾರೆ.