ನ್ಯೂಸ್

ವಿದುಷಿ ಪದ್ಮಿನಿ ಕೆ.ರಾವ್ ಅವರ ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ


ಸ್ವರಸಂಕುಲ ಸಂಗೀತ ಸಭಾದ ವತಿಯಿಂದ ಜು.21ರಂದು ಸಂಜೆ 6 ಗಂಟೆಗೆ ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ವಿದುಷಿ ಪದ್ಮಿನಿ ಕೆ.ರಾವ್ ಅವರ ಹಿಂದುಸ್ತಾನಿ ಶಾಸ್ತ್ರೀಯ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ.


ರ್ಹಾರ್ಮೋನಿಯಂನಲ್ಲಿ ಪಂಡಿತ್ ವೀರಭದ್ರಯ್ಯ ಹಿರೇಮಠ್ ಮತ್ತು ತಬಲಾದಲ್ಲಿ ಪಂಡಿತ್ ರಮೇಶ್ ಧನ್ನೂರ್ ಸಹಕಾರ ನೀಡಲಿದ್ದಾರೆ.
ಪದ್ಮಿನಿ ಕೆ.ರಾವ್ ಅವರು ಹಿಂದುಸ್ತಾನಿ ಕಿರಾಣಾ ಘರಾಣಾದ ಪ್ರಸಿದ್ಧ ಹಾಡುಗಾರ್ತಿ ವಿದುಷಿ ಪ್ರಭಾ ಅತ್ರೆಯವರ ಶಿಷ್ಯೆ. 35 ವರ್ಷಗಳಿಂದ ದೇಶ, ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿ ನೀಡಿ ಮೆಚ್ಚುಗೆ ಪಡೆದಿದ್ದಾರೆ. ಶಾಸ್ತ್ರೀಯ ಹಾಡುಗಾರಿಕೆಯ ಜತೆಗೆ ಠುಮರಿ ಮತ್ತು ಭಜನೆ ಹಾಡುವುದರಲ್ಲಿಯೂ ಪ್ರಸಿದ್ಧರು.