ಕೋಟೆ ಭೀಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಹಿಂದು ಮಹಾಸಭಾ ಗಣಪತಿ ದರ್ಶನ ಪಡೆದ ಸಚಿವ ಮಧು ಬಂಗಾರಪ್ಪ. ಎಸ್.ಎನ್.ಚನ್ನಬಸಪ್ಪ, ಬಲ್ಕೀಶ್ ಬಾನು, ಆರ್.ಪ್ರಸನ್ನಕುಮಾರ್, ಎಚ್.ಎಸ್.ಸುಂದರೇಶ್, ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ, ಎಸ್.ಕೆ.ಶರತ್, ಮೋಹನ್ ಇದ್ದರು. 
ನ್ಯೂಸ್

ಹಿಂದು ಮಹಾಸಭಾ ಗಣಪತಿ ದರ್ಶನ ಪಡೆದ ಸಚಿವ

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭಾನುವಾರ ಶಿವಮೊಗ್ಗದ ಹಿಂದು ಮಹಾಸಭಾ ಗಣಪತಿಯ ದರ್ಶನ ಪಡೆದರು. ಕೋಟೆ ರಸ್ತೆಯ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ವೀರ ಸಾವರ್ಕರ್ ಹಿಂದು ಸಂಘಟನಾ ಮಹಾಮಂಡಳಿಯಿಂದ ಪ್ರತಿಷ್ಠಾಪನೆಗೊಂಡಿರುವ ವಿಘ್ನ ನಿವಾರಕ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎರಡು ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರು ಭಾನುವಾರ ಸ್ವಕ್ಷೇತ್ರ ಸೊರಬದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದಕ್ಕೂ ಮುನ್ನ ಭೀಮೇಶ್ವರ ದೇವಸ್ಥಾನಕ್ಕೆ ತೆರಳಿ ಗಣಪತಿಗೆ ನಮಸ್ಕರಿಸಿದರು. ಸಚಿವರಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಜಿ.ಡಿ.ಮಂಜುನಾಥ, ಎಸ್.ಕೆ.ಶರತ್, ಮೋಹನ್ ಮತ್ತಿತರರು ಸಾಥ್ ನೀಡಿದರು.