ನ್ಯೂಸ್

VIDEO: ಅಂತರ್​ ಧರ್ಮೀಯ ವಿವಾಹ; 'ಲವ್​ ಜಿಹಾದ್​ 'ಎಂದು ಹೋರಾಟಕ್ಕಿಳಿದವರಿಗೆ ತಿರುಗೇಟು ಕೊಟ್ಟ ಯುವತಿ...

ಕಾನ್ಪುರ: ಇಲ್ಲಿ ನಡೆದ ಅಂತರ್​ ಧರ್ಮೀಯ ಮದುವೆಯೊಂದು ವಿವಾದದ ಕೇಂದ್ರಬಿಂದುವಾಗಿದೆ. ಹಿಂದು ಯುವತಿಯೋರ್ವಳು ಮುಸ್ಲಿಂ ಯುವಕನನ್ನು ವಿವಾಹವಾದ ನಂತರ, ಸ್ಥಳೀಯರು ಅದಕ್ಕೆ ಲವ್​ ಜಿಹಾದ್​ ಎಂದು ಹೆಸರಿಟ್ಟು, ಇನ್ನಿಲ್ಲದಂತೆ ಮಾತನಾಡಲು ಶುರು ಮಾಡಿದ್ದರು.

ಸ್ಥಳೀಯ ಭಜರಂಗ ದಳದ ಕಾರ್ಯಕರ್ತರು ಘಟನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಇದೊಂದು ಪಕ್ಕಾ ಲವ್​ ಜಿಹಾದ್​ ಪ್ರಕರಣವೆಂದು ಗಲಾಟೆ ಎಬ್ಬಿಸಿದ್ದಲ್ಲದೆ, ಕಿದ್ವಾಯಿ ನಗರದ ಪೊಲೀಸರೊಂದಿಗೂ ವಾಗ್ವಾದಕ್ಕೆ ಇಳಿದಿದ್ದರು. ಪ್ರಕರಣ ದಾಖಲಿಸಿಕೊಳ್ಳಲು ಒಂದೇ ಸಮ ಒತ್ತಡ ಹೇರಿದ್ದರು.

ಆದರೆ ಈಗ ಮುಸ್ಲಿಂ ಯುವಕನನ್ನು ಮದುವೆಯಾದ ಹಿಂದು ಯುವತಿಯೇ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾಳೆ. ಇದು ಲವ್​ ಜಿಹಾದ್​ ಅಲ್ಲ. ನಾನು ಇಷ್ಟಪಟ್ಟು, ನನ್ನ ಹೆಸರನ್ನೂ ಬದಲಿಸಿಕೊಂಡು ಕಾನೂನು ಪ್ರಕಾರವಾಗಿಯೇ ಅವನನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ.

ಕಾನ್ಪುರದ ಬಾರಾ ನಿವಾಸಿಯಾಗಿರುವ 21 ವರ್ಷದ ಶಾಲಿನಿ ಯಾದವ್​ ಇದೀಗ ಫಿಜಾ ಫಾತಿಮಾ ಎಂದು ಹೆಸರು ಬದಲಿಸಿಕೊಂಡು ಮೊಹಮ್ಮದ್​ ಫೈಸಲ್​ ಎಂಬುವನನ್ನು ವಿವಾಹವಾಗಿದ್ದಾಳೆ. ತನ್ನ ಫೇಸ್​ಬುಕ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿ, ನಮ್ಮ ಪ್ರೀತಿಗೆ ಲವ್​ ಜಿಹಾದ್​ ಎಂಬ ಹೆಸರು ಕೊಡುವುದು ಬೇಡ. ನನ್ನ ಇಚ್ಛೆಯ ಪ್ರಕಾರವೇ ಅವನೊಂದಿಗೆ ಬಂದಿದ್ದರೂ, ನನ್ನ ಪಾಲಕರು ಪೊಲೀಸರಿಗೆ ಸುಳ್ಳು ದೂರು ನೀಡಿ, ಮೊಹಮ್ಮದ್​ ನನ್ನನ್ನು ಅಪಹರಣ ಮಾಡಿದ್ದಾಗಿ ಹೇಳಿದ್ದಾರೆ. ನನ್ನ ಕುಟುಂಬದವರ ಮಾತನ್ನು ನಂಬಿಕೊಂಡು ಹೋರಾಟ ಮಾಡಬೇಡಿ ಎಂದು ಹೇಳಿದ್ದಾಳೆ.

ತಮ್ಮ ಮಗಳನ್ನು ಅಪಹರಿಸಿ, ಮದುವೆಯಾಗಿದ್ದಾನೆ ಎಂದು ಶಾಲಿನಿ ಮನೆಯವರು ಕಿದ್ವಾಯಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಹಾಗಾಗಿಯೇ ಭಜರಂಗ ದಳದ ಕಾರ್ಯಕರ್ತರೂ ಹೋರಾಟ ಶುರುವಿಟ್ಟುಕೊಂಡಿದ್ದರು. ಆದರೆ ಸದ್ಯ ಯುವತಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​