ರಾಣೆಬೆನ್ನೂರ: ರಕ್ತದಾನಕ್ಕೆ ಒಂದು ಜೀವ ಉಳಿಸುವ ಶಕ್ತಿಯಿದ್ದು ಅದು ಎಲ್ಲ ದಾನಗಳಲ್ಲಿ ಅತ್ಯಂತ ಶ್ರೇಷ್ಠವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.
ನಗರದ ಸಂಗಮ್ ಸರ್ಕಲ್ ಬಳಿ ಮಂಗಳವಾರ ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಮಂಟಪದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ರಕ್ತ ನಿಧಿ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದ ಕಾರಣ ಅದನ್ನು ದಾನಿಗಳಿಂದಲೇ ಪಡೆಯಬೇಕಾಗಿದೆ. ಆದ್ದರಿಂದ 18 ರಿಂದ 60 ವರ್ಷದೊಳಗಿನ ಪ್ರತಿಯೊಬ್ಬರೂ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಲು ಮುಂದೇ ಬರಬೇಕು ಎಂದರು.
ಡಾ. ಮೃತ್ಯುಂಜಯ ಹರಿಹರ, ಕುಬೇರಗೌಡ ಸಣ್ಣಮನಿ, ಅಜಯ ಮಠದ, ಬ್ಲಡ್ ಬ್ಯಾಂಕ್‌ನ ಮುಖ್ಯಸ್ಥ ಬಸವರಾಜ, ಯುವರಾಜ ಬಾರಾಟಕ್ಕೆ, ಗಜಾನನ ಕಮಿಟಿ ಸದಸ್ಯರು ಹಾಗೂ ರಕ್ತ ದಾನಿಗಳು ಭಾಗವಹಿಸಿದ್ದರು.