ಎಂಎಲ್‌ಸಿ ಡಿ.ಎಸ್.ಅರುಣ್  
ನ್ಯೂಸ್

ಕಾಂಗ್ರೆಸ್ ಸರ್ಕಾರಕ್ಕೆ ಹಿಂದು ಕಾರ್ಯಕರ್ತರೇ ಗುರಿ: ಡಿ.ಎಸ್.ಅರುಣ್ | Appeasement policy

ಬೆಂಗಳೂರು: ದ್ವೇಷ, ಕೋಮು ಹಿಂಸೆ ತಡೆಯುವ ನೆಪದಲ್ಲಿ ಹಿಂದು ಮುಖಂಡರು ಹಾಗೂ ಕಾರ್ಯಕರ್ತರನ್ನೇ ಕಾಂಗ್ರೆಸ್ ಸರ್ಕಾರಕ್ಕೆ ನಿರಂತರ ಗುರಿ ಎನ್ನುವುದು ಪದೇ ಪದೆ ಸಾಬೀತಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾವಳಿಯಲ್ಲಿ ಹಿಂದು ಮುಖಂಡರನ್ನು ದಮನಿಸಲು ಹೊರಟಿದ್ದು, ತುರ್ತು ಪರಿಸ್ಥಿತಿ ದಿನಗಳನ್ನು ನೆನಪಿಸುತ್ತಿದೆ. ಆರ್‌ಎಸ್‌ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಇತರ 15ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರ ವಿರುದ್ಧ ಎ್ಐಆರ್ ದಾಖಲಿಸಿರುವುದು ಆಘಾತಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯವಾದಿ, ಪ್ರಖರವಾಗ್ಮಿ ಚಕ್ರವತಿ ಸೂಲಿಬೆಲೆಯವರನ್ನು ಗಡಿಪಾರು ಮಾಡುವ ಹುನ್ನಾರ ನಡೆಯುತ್ತಿದ್ದು, ಓಲೈಕೆ ರಾಜಕಾರಣದ ಪರಮಾವಧಿಯಾಗಿದೆ. ‘ದ್ವೇಷ ಭಾಷಣ’ ಮಾಡಿದ್ದಾರೆ ಎಂಬುದನ್ನೇ ಆಧಾರವೆಂದು ಪರಿಗಣಿಸಿ ಎ್ಐಆರ್ ದಾಖಲಿಸುವುದಾದರೆ ಹಿಂದುಗಳ ವಿರುದ್ಧ ಪ್ರತಿದಿನವೂ ಬಾಯಿಗೆಬಂದಂತೆ ಮಾತನಾಡುವ ಅನ್ಯಕೋಮಿನ ಮುಖಂಡರ ಕೈಗೊಂಡಿಲ್ಲವೇಕೆ ? ಎಂದು ಡಿ.ಎಸ್.ಅರುಣ್ ಪ್ರಶ್ನಿಸಿದ್ದಾರೆ.

ಒಳಿತಿಗಾಗಿ ಹೋರಾಡದವರಿಗೆ ನೋವು

ಹಿಂದು ಸಮುದಾಯದ ಒಳಿತಿಗಾಗಿ ನಿರಂತರ ಹೋರಾಟ ನಡೆಸಿದವರು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನೋವು ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಸಮಾಜಘಾತುಕ ಶಕ್ತಿಗಳು, ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರನ್ನು ರಕ್ಷಿಸುವ ನಾಟಕ ನಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ಹೈಕೋರ್ಟ್ ಛೀಮಾರಿ ಹಾಕಿ, ರದ್ದುಮಾಡಿದ ನಿದರ್ಶನವಿದೆ. ಸುಳ್ಳು ಕೇಸ್ ದಾಖಲು, ಗಡಿಪಾರು ಆದೇಶ ಹೊರಡಿಸುವುದು ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನೀತಿಗೆ ಕೈಗನ್ನಡಿಯಾಗಿದೆ.

ಕಾಂಗ್ರೆಸ್ ಸರ್ಕಾರದ ಜನ, ಹಿಂದು ವಿರೋಧಿ ನೀತಿಯನ್ನು ಬಿಜೆಪಿ ಖಂಡಿಸುತ್ತದೆ. ಅನಗತ್ಯವಾಗಿ ಹಿಂದು ಮುಖಂಡರು, ಕಾರ್ಯಕರ್ತರ ವಿರುದ್ಧ ಹೂಡಿರುವ ದಾವೆ, ಗಡಿಪಾರು ಅದೇಶ ವಾಪಸ್ ಪಡೆಯಬೇಕು ಎಂದು ಡಿ.ಎಸ್.ಅರುಣ್ ಒತ್ತಾಯಿಸಿದ್ದಾರೆ.