Himachal Pradesh: ಕಳೆದ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟಕ್ಕೆ ಜನರ ಜೀವ ಮತ್ತು ಜೀವನ ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ಪ್ರವಾಹ ಮತ್ತು ಭೂಕುಸಿತದಿಂದ ಜನರು ಹೈರಾಣಾಗಿದ್ದಾರೆ. ಭಾರೀ ಪ್ರವಾಹಕ್ಕೆ ಇಲ್ಲಿಯವರೆಗೆ 92 ಸಾವುಗಳು ಸಂಭವಿಸಿದ್ದರೆ, 33 ಮಂದಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಪತಿಯ ಮೊಬೈಲ್ ಕಳುವಿಗೆ ಪತ್ನಿಯೇ ಸೂಪಾರಿ! ಖಾಕಿ ತನಿಖೆಯಲ್ಲಿ ಬಯಲಾಯ್ತು ಆಕೆಯ ರಹಸ್ಯ ಸಂಬಂಧ | Extramarital Affair
ಹಿಮಾಚಲ ಪ್ರದೇಶದ ರಾಜಧಾನಿ ಮಂಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ವ್ಯಾಪಕ ಮಳೆ, ಪ್ರವಾಹ ಸಂಭವಿಸಿದೆ. ನಿರಂತರ ಮಳೆಯಿಂದ ರಾಜ್ಯದ ಒಟ್ಟು 249 ರಸ್ತೆಗಳು ಬಂದ್ ಆಗಿದ್ದು, ಮಂಡಿಯ 207 ಮುಖ್ಯರಸ್ತೆಗಳು ಸಂಪೂರ್ಣವಾಗಿ ಹಾನಿಯಾಗಿವೆ.
ವರುಣಾರ್ಭಟಕ್ಕೆ ಇಲ್ಲಿಯವರೆಗೆ 92 ಜನರು ಮೃತಪಟ್ಟಿದ್ದರೆ, 33 ಮಂದಿ ಕಾಣೆಯಾಗಿದ್ದಾರೆ. 56 ಮಳೆ ಸಂಬಂಧಿತ ಘಟನೆಗಳು ನಡೆದಿದ್ದು, 36 ರಸ್ತೆ ಅಪಘಾತಗಳು ಸಂಭವಿಸಿವೆ. ಹೆಚ್ಚುವರಿಯಾಗಿ, 172 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಜ್ಯದ ಹಲವಾರು ಭಾಗಗಳಲ್ಲಿ ಶುಕ್ರವಾರ (ಜು.12) ಸಂಜೆಯೂ ಧಾರಕಾರ ಮಳೆ ಸುರಿದಿದ್ದು, ಇನ್ನು ಕೆಲವು ದಿನಗಳ ಕಾಲ ವರುಣಾರ್ಭಟ ಮುಂದುವರಿಯಲಿದೆ. ರಾಜ್ಯದ 12 ಜಿಲ್ಲೆಗಳಲ್ಲಿ ಜುಲೈ 18 ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನಲೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ,(ಏಜೆನ್ಸೀಸ್).