ಅಪಘಾತದಲ್ಲಿ ಜಖಂಗೊಂಡ ಹೆದ್ದಾರಿ ಗಸ್ತು ವಾಹನ  
ನ್ಯೂಸ್

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಹೆದ್ದಾರಿ ಗಸ್ತು ವಾಹನ

ನಾಪೋಕ್ಲು: ಸಮೀಪದ ಮೂರ್ನಾಡು ಪಟ್ಟಣದಲ್ಲಿ ಮಂಗಳವಾರ ಚಾಲಕನ ನಿಯಂತ್ರಣ ತಪ್ಪಿದ ಹೆದ್ದಾರಿ ಗಸ್ತು ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪೊಲೀಸ್ ವಾಹನ ಮೂರ್ನಾಡುವಿನಿಂದ ಮಡಿಕೇರಿ ಕಡೆ ಮಂಗಳವಾರ ತಡರಾತ್ರಿ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ವಾಹನ ಜಖಂಗೊಂಡಿದ್ದು, ವಿದ್ಯುತ್ ಕಂಬ ಮುರಿದಿದೆ.