ವಿಜಯಪುರ: ಎಜುಕೇಶನ್ ಎಕ್ಸ್ಪೋದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ವೀಕ್ಷಕರ ಗಮನ ಸೆಳೆಯಿತು.
ಅಗಸ ಫೌಂಡೇಷನ್ ನೇತೃತ್ವದಲ್ಲಿ ನಗರ ಸೇರಿ ಜಿಲ್ಲೆಯ ವಿವಿಧ ಶಾಲೆಗಳ ಮಕ್ಕಳು ಪ್ರದರ್ಶಿಸಿರುವ ವಿವಿಧ ವಿಜ್ಞಾನ ಮಾದರಿಗಳು ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಕುತೂಹಲ ಮೂಡಿಸಿದವು.
ಮಕ್ಕಳಲ್ಲಿ ಅಡುಗಿದ ಸುಪ್ತ ಪ್ರತಿಭೆ ಹೊರಹಾಕಲು ಎಜುಕೇಶನ್ ಎಕ್ಸ್ಪೋದಲ್ಲಿ ವೇದಿಕೆ ಕಲ್ಪಿಸಿಕೊಡಲಾಗಿತ್ತು. ಈ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಹೆಚ್ಚಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಹಿಟ್ನಳ್ಳಿಯ ಹೇಮರಡ್ಡಿ ಮಲ್ಲಮ್ಮ ಶಾಲೆ ಮಕ್ಕಳು ಸ್ಮಾರ್ಟ್ ಹೌಸ್ ಸಿದ್ಧಪಡಿಸಿದ್ದರು. ಬ್ಯಾಟರಿ ಚಾಲಿತ ವಿದ್ಯುತ್ ಉತ್ಪಾದನೆ ಪರಿಕಲ್ಪನೆ ಇದಾಗಿದೆ. ಚಪ್ಪಾಳೆ ತಟ್ಟಿದರೆ ಆ್, ಆನ್ ಆಗುತ್ತಿತ್ತು. ವಿದ್ಯುತ್ ತಗುಲಿ ಸಾವಿಗೀಡಾಗುವುದನ್ನು ನಾವು ಆವಿಷ್ಕರಿಸಿದ ಮಾದರಿ ತಪ್ಪಿಸುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದರು.
ತಿಕೋಟಾದ ಶಾರದಾಂಬೆ ಶಾಲೆ ಮಕ್ಕಳು ಅಲ್ಯೂಮಿನಿಯಂ ಮತ್ತು ಪ್ಲಾಸ್ಟಿಕ್ ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ವಿಧಾನವನ್ನು ಪ್ರದರ್ಶಿಸಿದರು. ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆ ನಂ& 37ರ ಮಕ್ಕಳು ಇಳಿಜಾರದ ಸಮರ್ಥನೆ, ಕೆಬಿಎಸ್ &45 ಶಾಲೆ ಮಕ್ಕಳು ಗ್ಲೋಬಲ್ ಮಾದರಿ ಪ್ರದರ್ಶಿಸಿ ವೀಕ್ಷಕರ ಗಮನ ಸೆಳೆದರು.
ಭೂಮಿ ಸುತ್ತುವಿಕೆ, ಅಮಾವಾಸ್ಯೆ& ಹುಣ್ಣಿಮೆ ಪರಿಕಲ್ಪನೆ, ಗ್ರಹಣ ಸಂಭವಿಸುವಿಕೆ, ಹಗಲು, ರಾತ್ರಿ, ಮಾನವನ ಅಂಗ ರಚನೆ ಕುರಿತು ಮಕ್ಕಳು ಮಾದರಿ ಸಿದ್ಧಪಡಿಸಿದ್ದರು. ವಿವಿಧ ಗ್ರಹ, ಚಂದ್ರನ ಮುಖಗಳು, ಖಗೋಳದ ಕುರಿತು ಸಮಗ್ರ ಮಾಹಿತಿಯನ್ನು ವಿದ್ಯಾರ್ಥಿಗಳು ನೀಡಿದರು.
ವಿವಿಧ ಶಾಲೆ, ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರದರ್ಶನ ವೀಸಿ ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳಿಗೆ ಇಂಥ ಅವಕಾಶ ನೀಡಿದ ವಿಜಯವಾಣಿಗೂ ಪಾಲಕರು ಕೃತಜ್ಞತೆ ಸಲ್ಲಿಸಿದರು.
ಲೌಖಿಕ ಸಂಪತ್ತು ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ. ಜ್ಞಾನ ಸಂಪತ್ತು ಖರ್ಚು ಮಾಡಿದಷ್ಟು ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿ ಅಡಗಿರುವ ಜ್ಞಾನವನ್ನು ಪ್ರದರ್ಶನ ನೆಪದಲ್ಲಿ ನಾಲ್ಕು ಜನರೊಂದಿಗೆ ಹಂಚಿಕೊಂಡು ಮತ್ತಷ್ಟು ವೃದ್ಧಿಸಿಕೊಂಡರು