ನ್ಯೂಸ್

ರೇಣುಕಸ್ವಾಮಿ ಹತ್ಯೆ ಕೇಸ್​: ಆರೋಪಿ ದರ್ಶನ್​ ಜಾಮೀನು ಅರ್ಜಿ ಅ.28ಕ್ಕೆ ಮುಂದೂಡಿದ ಹೈಕೋರ್ಟ್​ | Darshan

ಬೆಂಗಳೂರು: ಅ. 14ರಂದು ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ2 ಆರೋಪಿ ದರ್ಶನ್​ರ ಜಾಮೀನು (Darshan Bail) ಅರ್ಜಿ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್​ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಸಿವಿಲ್ ಕೋರ್ಟ್​ನಲ್ಲಿ ಜಾಮೀನು ಸಿಗದ ಕಾರಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ ದರ್ಶನ್​ಗೆ ನ್ಯಾಯಾಲಯ ಅ.22ರಂದು ವಿಚಾರಣೆಗೆ ಕರೆದಿತ್ತು.

ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಮನವಿ ಮಾಡಿದ್ದೇನು?

  • ಬೆನ್ನು ಹುರಿ ನೋವಿನಿಂದ ದರ್ಶನ್ ಬಳಲುತ್ತಿದ್ದಾರೆ. ಅವರನ್ನು ವಿಮ್ಸ್ ಆಸ್ಪತ್ರೆಗೆ ನಿನ್ನೆ ದಾಖಲಿಸಲಾಗಿದೆ. ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದ್ದು, ವೈದ್ಯರು ಸರ್ಜರಿ ಅಗತ್ಯವಿದೆ ಎಂದಿದ್ದಾರೆ. ಇದ‌ನ್ನು ಪರಿಗಣಿಸಿ ಜಾಮೀನು ನೀಡುವಂತೆ ದರ್ಶನ್ ಪರ ಸಿ.ವಿ ನಾಗೇಶ್ ಮನವಿ. •ವಾದ ಆಲಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಎಸ್​ಪಿಪಿ ಪ್ರಸನ್ನಕುಮಾರ್​ಗೆ ಸೂಚನೆ ನೀಡಿದ್ದು, ಜೈಲು ಅಧಿಕಾರಿಗಳಿಂದ ವೈದ್ಯಕೀಯ ವರದಿ ಕೇಳಿದೆ.
  • ಜಾಮೀನು‌ ಕೋರಿ‌ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಇದೀಗ ವಿಚಾರಣೆಯನ್ನು ಅ.28ಕ್ಕೆ ಮುಂದೂಡಿದೆ.