ಸೊರಬ ತಾಲೂಕಿನ ಭಾರಂಗಿ ಗ್ರಾಪಂ ನೂತನ ಕಟ್ಟಡವನ್ನು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಉದ್ಘಾಟಿಸಿದರು. ಶ್ರೀರಾಮ್, ಕಲಾವತಿ, ಭಾಗ್ಯಾ, ಬಿ.ಶಿವರಾಜ, ಕೆ.ಪಿ.ರುದ್ರಗೌಡ, ಸದಾನಂದ ಗೌಡ ಇತರರಿದ್ದರು.  
ನ್ಯೂಸ್

ಭಾರಂಗಿ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು

ಸೊರಬ: ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅನುಷ್ಠಾನಗೊಂಡ ಗ್ಯಾರಂಟಿ ಯೋಜನೆಗಳು ಜನರು ಆರ್ಥಿಕವಾಗಿ ಬಲವರ್ಧನೆಯಾಗಲು ಸಹಕಾರಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಭಾರಂಗಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಮ ಸಮಾಜದ ನಿರ್ಮಾಣಕ್ಕೆ ಗ್ಯಾರಂಟಿ ಯೋಜನೆಗಳು ಅಡಿಪಾಯ. ಯಾವುದೇ ಯೋಜನೆಯಿಂದ ಅರ್ಹರು ವಂಚಿತರಾಗದಂತೆ ಅಧಿಕಾರಿಗಳು ಕ್ರಮವಹಿಸುವಂತೆ ತಾಕೀತು ಮಾಡಿದರು.

ತಾಲೂಕಿನಲ್ಲಿ ಮೊದಲ ಬಾರಿ ಶಾಸಕನಾಗಿದ್ದಾಗ ಕುಪ್ಪಗಡ್ಡೆ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿತ್ತು. ತಾಲೂಕಿನಲ್ಲಿ ಎಲ್ಲ ಗ್ರಾಪಂ ಕಟ್ಟಡ ಪೂರ್ಣಗೊಂಡು ಕೊನೆಯದಾಗಿ ಭಾರಂಗಿ ಗ್ರಾಮ ಪಂಚಾಯಿತಿ ಕಟ್ಟಡವೂ ನನ್ನ ಅವಧಿಯಲ್ಲಿಯೇ ಉದ್ಘಾಟನೆ ಆಗುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಭಾರಂಗಿ ಗ್ರಾಮದಲ್ಲಿ ದಶಕದ ಹಿಂದೆಯೇ ಪ್ರೌಢಶಾಲೆ ಮುಚ್ಚಲ್ಪಟ್ಟಿದೆ. ಪುನಃ ಈ ಗ್ರಾಮಕ್ಕೆ ಪ್ರೌಢಶಾಲೆ ಮಂಜೂರು ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುತ್ತೇನೆ. ಅಲ್ಲದೆ ಈ ಗ್ರಾಮಗಳ ರಸ್ತೆ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಕೆಡಿಪಿ ಸದಸ್ಯ ಸದಾನಂದ ಗೌಡ, ಗ್ರಾಪಂ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷೆ ಭಾಗ್ಯಾ, ಸದಸ್ಯರಾದ ಚೈತ್ರಾ ಸುರೇಶ್, ಬಸವರಾಜ್, ಶಿವರಾಜ್, ಎನ್.ಆರ್.ಶಿವಕುಮಾರ್, ಅಂಜಲಿ ಸಂಜೀವ, ಗದಿಗೆಪ್ಪ, ಯೋಗೇಂದ್ರ ಗೌಡ, ಚಂದ್ರಶೇಖರಯ್ಯ, ಮಾಜಿ ಅಧ್ಯಕ್ಷ ನಾಗಪ್ಪ, ಎಡಿಪಿಆರ್ ತಾಲೂಕು ನಿರ್ದೇಶಕ ಶ್ರೀರಾಮ್, ತಾಪಂ ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್, ಎಇಇ ನಾಗರಾಜ್ ಅನ್ವೇಕರ್, ಪಿಡಿಒ ಬಿ.ಶಿವರಾಜ ಇತರರಿದ್ದರು.