ನ್ಯೂಸ್

ಸರ್ಕಾರಕ್ಕೆ 2 ಲಕ್ಷ ದಂಡ ವಿಧಿಸಿದ ಹೈಕೋರ್ಟ್ : ಈಜುಗಾರನಿಗೆ ಬಹುಮಾನ ಮೊತ್ತ ಕೊಡದ ಪ್ರಕರಣ

ಬೆಂಗಳೂರು:  ರಾಷ್ಟ್ರೀಯ ಪ್ಯಾರಾಲಿಂಪಿಕ್ ಈಜು ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಎರಡೂ ಕೈ ಇಲ್ಲದ ನಗರದ ಈಜುಗಾರನಿಗೆ ಕೊಡಬೇಕಾದ 6 ಲಕ್ಷ ನಗದು ಬಹುಮಾನದಲ್ಲಿ 1.26 ಲಕ್ಷ ಪಾವತಿ ಮಾಡದೆ ಸತಾಯಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 2 ಲಕ್ಷ ದಂಡ ವಿಧಿಸಿದೆ.

ಕೆ.ಎಸ್.ವಿಶ್ವಾಸ್ (34) ಸಲ್ಲಿಸಿದ್ದ ಮನವಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ದಂಡದ ಮೊತ್ತವನ್ನು ದಾವೆಯ ಖರ್ಚಿನ ರೂಪದಲ್ಲಿ ಅರ್ಜಿದಾರರಿಗೆ 2 ವಾರಗಳಲ್ಲಿ ಪಾವತಿಸಬೇಕು ಎಂದು ತಾಕೀತು ಮಾಡಿದೆ.

’ಅರ್ಜಿದಾರ ವಿಶ್ವಾಸ್ 2016 ರಿಂದ 2018ರವರೆಗಿನ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗಳಿಸಿದ್ದಾರೆ. ಆದರೆ, ಇವರ ಸಾಧನೆಗೆ ಸರ್ಕಾರವೇ ಘೋಷಿಸಿದ ನಗದು ಬಹುಮಾನದ ಬಾಕಿಯನ್ನು ಆರು ವರ್ಷಗಳು ಕಳೆದರೂ ನೀಡದೆ ಸತಾಯಿಸಲಾಗಿತ್ತು.