ನ್ಯೂಸ್

ಜಾತಿಗಣತಿಗೆ ತಡೆ ಕೋರಿ ಅರ್ಜಿ; ವಿಚಾರಣೆ ಸೆ.25ಕ್ಕೆ ಮುಂದೂಡಿದ ಹೈಕೋರ್ಟ್ | Caste Census

Caste Census: ಜಾತಿಗಣತಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್​) ವಿಚಾರಣೆ ನಡೆಸಿದ ಹೈಕೋರ್ಟ್ ಗುರುವಾರ (ಸೆ.25) ಮುಂದೂಡಿದೆ.

ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸ್ಥಿತಿ ಸಮೀಕ್ಷೆ (ಜಾತಿ ಗಣತಿ) ಸೆ.22ರಿಂದ ಆರಂಭವಾಗಿದೆ. ಆದರೆ, ಇದನ್ನು ವಿರೋಧಿಸಿ ಪಿಐಎಲ್​ ದಾಖಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠ, ಅರ್ಜಿ ಸಂಬಂಧಿಸಿದೆ ಹೆಚ್ಚುವರಿ ವಾದ ಮಂಡಿಸಲು ಬಯಸಿದ್ದಲ್ಲಿ ಗುರುವಾರ ವಾದ ಮಂಡಿಸಬಹುದು ಎಂದು ವಿಚಾರಣೆಯನ್ನು ಇದೀಗ ಗುರುವಾರಕ್ಕೆ ಮುಂದೂಡಿಕೆ ಮಾಡಿದೆ.

ಕೇಂದ್ರ, ರಾಜ್ಯ ಸರ್ಕಾರ ಮತ್ತು ಸೆನ್ಸಸ್ ಮಂಡಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಗಣತಿ ಕಾರ್ಯಕ್ಕೆ ಮಧ್ಯಂತರ ತಡೆ ನೀಡುವ ಬಗ್ಗೆ ಅಂತಿಮ ವಿಚಾರಣೆ ನಾಳೆ ನಡೆಯಲಿದೆ.