ರಾಣೆಬೆನ್ನೂರ: ಇಲ್ಲಿಯ ಹೆಸ್ಕಾಂ ಉಪ-ವಿಭಾಗಕ್ಕೆ ಸಂಬಂಧಿಸಿದ ಗ್ರಾಹಕರ ಕುಂದುಕೊರತೆ ಆಲಿಸುವ ಸಲುವಾಗಿ ಆ. 19ರಂದು ಮಧ್ಯಾಹ್ನ 3 ಗಂಟೆಗೆ ನಗರದ ಹಳೆ ಪಿ.ಬಿ. ರಸ್ತೆಯ ಉಪ ವಿಭಾಗ-1ರ ಕಚೇರಿಯಲ್ಲಿ ಗ್ರಾಹಕರ ಸಂವಾದ ಸಭೆ ಏರ್ಪಡಿಸಲಾಗಿದೆ.
ಗ್ರಾಹಕರು ಭಾಗವಹಿಸಿ ಅನಿಸಿಕೆ, ದೂರುಗಳು, ಸಲಹೆ ನೀಡಬಹುದು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.