ನ್ಯೂಸ್

ಪ್ರಾಣಾಪಾಯದಿಂದ ನಟ ರಿಷಬ್​ ಶೆಟ್ಟಿ, ನಟಿ ಗಾನವಿ ಜಸ್ಟ್ ಮಿಸ್​!

ಹಾಸನ: 'ಹೀರೋ' ಸಿನಿಮಾ ಚಿತ್ರೀಕರಣದ ವೇಳೆ ಬೆಂಕಿ ಅವಘಡ ಸಂಭವಿಸಿದ್ದು, ದೊಡ್ಡ ಗಂಡಾಂತರದಿಂದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ನಟಿ ಗಾನವಿ ಪಾರಾಗಿದ್ದಾರೆ.

ಹಾಸನದ ಬೇಲೂರು ಬಳಿ ಶೂಟಿಂಗ್​ ನಡೆಯುತ್ತಿತ್ತು. ಆ್ಯಕ್ಷನ್​ ಸೀನ್​ ಚಿತ್ರೀಕರಣದ ವೇಳೆ ಪೆಟ್ರೋಲ್ ಬಾಂಬ್ ಸಿಡಿದಿದೆ. ಆ ಬೆಂಕಿ ರಿಷಬ್​ ಶೆಟ್ಟಿಗೆ ತಾಗಿದ್ದು, ಅವರ ತಲೆ ಕೂದಲು ಸುಟ್ಟಿರುವ ಹಾಗೂ ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ಪೆಟ್ರೋಲ್​ ಬಾಂಬ್​ ಸಿಡಿದ ವೇಳೆ ಕೊಂಚ ಯಾಮಾರಿದ್ರು ನಟ ರಿಷಬ್ ಶೆಟ್ಟಿ ಮತ್ತು ನಟಿ ಗಾನವಿ ಪ್ರಾಣಕ್ಕೆ ಅಪಾಯವಿತ್ತು. ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಅದೃಷ್ಟವಶಾತ್ ಹೆಚ್ಚಿನ ಅನಾವುತ ಸಂಭವಿಸಿಲ್ಲ.