ಬೆಂಗಳೂರು: ಕಟ್ಟಡ ಸೇರಿ ಇತರೆ ಯಾವುದೇ ಕಾರ್ವಿುಕರ ವೇತನ ಕಡಿತಕ್ಕೆ ಅವಕಾಶ ಕೊಡುವುದಿಲ್ಲ. ಎಲ್ಲ ಕ್ಷೇತ್ರಗಳ ಕಾರ್ವಿುಕರ ಹಿತರಕ್ಷಣೆಗೆ ಸರ್ಕಾರ ಬದ್ಧ ಎಂದು ಕಾರ್ವಿುಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ನಗರದ ಹಲವೆಡೆ ನಿರ್ಮಾಣದ ಹಂತದಲ್ಲಿರುವ ಬೃಹತ್ ಕಟ್ಟಡಗಳ ಬಳಿಗೆ ತೆರಳಿ ಕಾರ್ವಿುಕರ ಅಹವಾಲು ಆಲಿಸಿದರು. ಕಾರ್ವಿುಕ ಇಲಾಖೆ ಜತೆಗೆ ಇತರೆ ಇಲಾಖೆಗಳ ಅಧಿಕಾರಿಗಳು ಪ್ರತಿದಿನ 2 ಪ್ರದೇಶಗಳಿಗೆ ಭೇಟಿ ನೀಡಿ ಕಾರ್ವಿುಕರ ಯೋಗಕ್ಷೇಮ ವಿಚಾರಿಸಬೇಕು. ಆರೋಗ್ಯದ ದೃಷ್ಟಿಯಿಂದ ಕಾರ್ವಿುಕರಿಗೆ ಮಾಸ್ಕ್, ಸ್ಯಾನಿಟೈಸರ್ ಒದಗಿಸಬೇಕು ಎಂದರು. ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಹಾಗೂ ಸರ್ಕಾರ ತಮ್ಮ ಜತೆಗಿದೆ ಎಂಬ ಆತ್ಮವಿಶ್ವಾಸವನ್ನು ಕಟ್ಟಡ ಕಾರ್ವಿುಕರಲ್ಲಿ ಮೂಡಿಸುವುದು ಈ ಭೇಟಿ ಉದ್ದೇಶ ಎಂದು ಸಚಿವರು ತಿಳಿಸಿದರು.
ಊರಿಗೆ ಹೋಗುವ ಬಯಕೆ: ಊರಿಗೆ ಹೋಗಬೇಕೆನಿಸುತ್ತದೆ ಎಂದು ಮಾಧವ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಕೆಪಿಟಿಸಿಎಲ್ ಕಟ್ಟಡ ಮತ್ತು ಜೆಎಂಸಿ ಪ್ರಾಜೆಕ್ಟ್ ಲಿ. ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿರುವ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದ ಕಾರ್ವಿುಕರು ಅಳಲು ತೋಡಿಕೊಂಡರು. ಆಗ ಸಚಿವರು, ನಿಯಮಗಳ ಪಾಲನೆ ಹಾಗೂ ಕಾರ್ವಿುಕರ ಸಹಾಯವಾಣಿ ಕುರಿತು ಮಾಹಿತಿ ನೀಡಿದರು.