ನ್ಯೂಸ್

ಹೆಣ್ಣೂರಿನಲ್ಲಿ ಬ್ಯಾಂಕ್ ಆ್ ಬರೋಡಾದ ಹೊಸ ಶಾಖೆ

ಬೆಂಗಳೂರು:
ಹೆಣ್ಣೂರಿನಲ್ಲಿ ಬ್ಯಾಂಕ್ ಆ್ ಬರೋಡಾದ 49ನೇ ಹೊಸ ಶಾಖೆಯನ್ನು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಲಲಿತ್ ತ್ಯಾಗಿ ಅವರು ಉದ್ಘಾಟಿಸಿದರು.
ಅವರು ಮಾತನಾಡಿ, ಹೆಣ್ಣೂರಿನಲ್ಲಿ ಭಾರಿ ವ್ಯಾಪಾರ ಸಾಮರ್ಥ್ಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಶಾಖೆಯನ್ನು ತೆರೆಯಲಾಗಿದೆ. ಬ್ಯಾಂಕ್ 2 ವರ್ಷಗಳಲ್ಲಿ 100 ಕೋಟಿ ರೂ ವ್ಯಾಪಾರ ವಹಿವಾಟು ನಡೆಸುವ ಗುರಿ ಹೊಂದಿದೆ. ಗ್ರಾಹಕರು ಅತ್ಯಾಧುನಿಕ ಡಿಜಿಟಲ್ ಅನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಬ್ಯಾಂಕಿನಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಸ್ಪರ್ಧಾತ್ಮಕ ಬಡ್ಡಿ ದರವನ್ನು ನೀಡಲಾಗುತ್ತಿದೆ.
ವಿವಿಧ ಹೋಮ್ ಲೋನ್, ಕಾರ್ ಲೋನ್, ಟರ್ಮ ಡಿಪಾಸಿಟ್ಸ್ ಮಾನ್ಸೂನ್ ಧಮಾಕಾ ಯೋಜನೆ
ವಿವಿಧ ಬ್ಯಾಂಕಿಂಗ್ ಉತ್ಪನ್ನಗಳಿಗೆ ಬ್ಯಾಂಕ್ ಆ್ ಬರೋಡಾ ಹೆಸರುವಾಸಿಯಾಗಿದೆ ಎಂದರು.
ಜನರಲ್ ಮ್ಯಾನೇಜರ್ ಮತ್ತು ಝೋನಲ್ ಹೆಡ್ ಇಂದರ್ ಮೋಹನ್ ಸಿಂಗ್ ಮತ್ತು
ವ್ಯವಹಾರ ಅಭಿವೃದ್ಧಿ ಡಿಜಿಎಂ ಮಾನಸ್ ರಂಜನ್, ಡಿಜಿಎಂ (ಸಿಎ) ವಿವೇಕ್ ಕುಮಾರ್ ಚೌಧರಿ, ಬೆಂಗಳೂರು ಉತ್ತರ ಡಿಜಿಎಂ ಭರತ್ ಭೂಷಣ್ ಮತ್ತು ಇನ್ನಿತರ ಅಧಿಕಾರಿಗಳು ಹಾಜರಿದ್ದರು.