ನ್ಯೂಸ್

VIDEO| ಹೇಮಾ ಮಾಲಿನಿಗೂ ಕರೊನಾ!?; ಮಗಳು ಇಶಾ ಕೊಟ್ಟ ಸ್ಪಷ್ಟನೆ ಹೀಗಿದೆ...

ಕರೊನಾ ಸೋಂಕು ದಿನೇದಿನೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಬಾಲಿವುಡ್​ನ ಸೂಪರ್​ಸ್ಟಾರ್ ಅಮಿತಾಬ್​ ಬಚ್ಚನ್​ಗೂ ಶನಿವಾರ ಕರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ. ಅದರ ಬೆನ್ನಲ್ಲೆ ಅಭಿಷೇಕ್​ ಬಚ್ಚನ್​ ವರದಿ ಸಹ ಪಾಸಿಟಿವ್​ ಬಂದಿತ್ತು. ಅನುಪಮ್​ ಖೇರ್​ ಕುಟುಂಬಕ್ಕೂ ಕರೊನಾ ಅಂಟಿದೆ. ಹೀಗಿರುವಾಗಲೇ ಹಿರಿಯ ನಟಿ ಹೇಮಾ ಮಾಲಿನಿಗೂ ಕರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸೋಷಿಯಲ್​ ಮೀಡಿಯಾಗಳಲ್ಲಿ ಹೇಮಾಮಾಲಿನಿಗೂ ಕರೊನಾ ಎಂಬಿತ್ಯಾದಿ ಸುದ್ದಿ ಹರಿದಾಡಿದ್ದರ ಹಿನ್ನೆಲೆಯಲ್ಲಿ ಹೇಮಾಲಿನಿ ಪುತ್ರಿ ಇಶಾ ಡಿಯೋಲ್​ ಸ್ಪಷ್ಟನೆ ನೀಡಿದ್ದಾರೆ. ನನ್ನ ತಾಯಿ ಹೇಮಾಮಾಲಿನಿ ಆರೋಗ್ಯವಾಗಿದ್ದಾರೆ. ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಹರಿದಾಡುತ್ತಿರುವ ಸುದ್ದಿ ಸುಳ್ಳು. ಅಂತ ವದಂತಿಗಳಿಗೆ ಸ್ಪಂದಿಸಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಟ್ವಿಟರ್ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್​ ಹಾಕಿದ್ದಾರೆ.

ಇನ್ನು ಸ್ವತಃ ಹೇಮಾಮಾಲಿನಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿಕೊಂಡು, ಹರಿದಾಡುತ್ತಿರುವ ಸುದ್ದಿಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ. ಸದ್ಯ ಬಾಲಿವುಡ್​ ಹಲವು ಘಟಾನುಘಟಿ ಸಿನಿಮಾ ತಾರೆಯರಿಗೆ ಕರೊನಾ ಪಾಸಿಟಿವ್​ ವರದಿಯಾಗುತ್ತಿರುವ ಬೆನ್ನಲ್ಲೇ, ಸೋಷಿಯಲ್​ ಮೀಡಿಯಾದಲ್ಲಿ ಫೇಕ್​ ಸುದ್ದಿಗಳ ಆರ್ಭಟವೂ ಜೋರಾಗಿದೆ. (ಏಜೆನ್ಸೀಸ್​)