ಸಾಗರದ ಎಸ್.ಎನ್.ನಗರದ ಆಶ್ರಮ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಲ ತರಗತಿಗಳಿಗೆ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಬಿಇಒ ಇ.ಪರಶುರಾಮಪ್ಪ ಚಾಲನೆ ನೀಡಿದರು. ಎಂ.ಪಿ.ಸತ್ಯನಾರಾಯಣ, ಎಸ್.ಎನ್.ಪಾಲಾಕ್ಷಪ್ಪ ಇತರರಿದ್ದರು. 
ನ್ಯೂಸ್

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವಾಗಿ

ಸೋಮಶೇಖರ ಎನ್

ಸಾಗರ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಾಲಕರು ಮತ್ತು ದಾನಿಗಳು ನೆರವಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇ.ಪರಶುರಾಮಪ್ಪ ಹೇಳಿದರು.

ಎಸ್.ಎನ್. ನಗರದ ಆಶ್ರಮ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳ ನೆರವಿನಿಂದ ಎಲ್ಲ ತರಗತಿಗಳಿಗೆ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ತರಗತಿಗಳಿಗೂ ಸಿಸಿ ಕ್ಯಾಮರಾ ಹಾಕಿಸಿರುವುದು ಒಳ್ಳೆಯದು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಎಂ.ಪಿ.ಸತ್ಯನಾರಾಯಣ ಮಾತನಾಡಿ, 1 ಲಕ್ಷ ರೂ. ವೆಚ್ಚದಲ್ಲಿ 16 ಸಿಸಿ ಕ್ಯಾಮರಾ ಅಳವಡಿಸಿದ್ದು, ರಾಯಲ್ ಬಿಲ್ಡರ್ಸ್ ಸೇರಿದಂತೆ ದಾನಿಗಳು ಆರ್ಥಿಕ ನೆರವು ನೀಡಿದ್ದಾರೆ. ಮಕ್ಕಳ ಚಟುವಟಿಕೆ ಬಗ್ಗೆ ನಿಗಾವಹಿಸಲು ಸಹಕಾರಿಯಾಗುತ್ತದೆ ಎಂದರು. ಶಿಕ್ಷಣ ಸಂಯೋಜಕ ಎಸ್.ಎನ್.ಪಾಲಾಕ್ಷಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್.ಮೋಹನ್, ರಾಯಲ್ ಬಿಲ್ಡರ್ಸ್‌ನ ರಾಘವೇಂದ್ರ, ನಗರಸಭಾ ಸದಸ್ಯೆ ಸವಿತಾ ವಾಸು, ಸುನಿತಾ, ನಾಗರತ್ನಾ, ಜ್ಯೋತಿ ಇತರರಿದ್ದರು.