ನ್ಯೂಸ್

ಅಬ್ಬಬ್ಬಾ ಹೆಬ್ಬಾಪಟೇಲ್ ಬೋಲ್ಡ್​ ಲುಕ್​ಗೆ ಪಡ್ಡೆಗಳು ಫಿದಾ..

ಬೆಂಗಳೂರು: ಕನ್ನಡ ಪ್ರೇಕ್ಷಕರಿಗೆ ‘ಅಧ್ಯಕ್ಷ’ ಸಿನಿಮಾ ಮೂಲಕ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪರಿಚಯವಾಗಿದ್ದ ಹೆಬ್ಬಾ ಪಟೇಲ್, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಗ್ಲಾಮರ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರು ಹೊಸ ಹೊಸ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಆ ಪಟ್ಟಿಯಲ್ಲಿ ಹೆಬ್ಬಾ ಪಟೇಲ್ ಕೂಡ ಇದ್ದಾರೆ. ಸಿನಿಮಾಗಳ ಹೊರತಾಗಿ ಸಾಮಾಜಿಕ ಜಾಲತಾಣದಲ್ಲಿ ನಟಿಯರು ಸಖತ್ ಬ್ಯುಸಿಯಾಗುತ್ತಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ವಿಭಿನ್ನ ಫೋಟೋಶೂಟ್ ನಡೆಸಿ ತಮ್ಮ ಸೌಂದರ್ಯ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಮುಂದಾಗುತ್ತಿದ್ದಾರೆ.

ಹೆಬ್ಬಾ ಪಟೇಲ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ ಒಳ್ಳೆಯ ಗ್ಲಾಮರ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಈಕೆ ಹಾಕಿರುವ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪಡ್ಡೆಗಳನ್ನು ಹುಚ್ಚೆಬ್ಬಿಸುತ್ತಿದೆ.

‘ಅಧ್ಯಕ್ಷ’ ಸಿನಿಮಾದಲ್ಲಿ ನಟಿಸಿ ಕನ್ನಡ ಸಿನಿಮಾ ಪ್ರೇಕ್ಷರ ಮೆಚ್ಚುಗೆ ಪಡೆದಿದ್ದ ಹೆಬ್ಬಾ ಪಟೇಲ್, ಶಿವರುದ್ರೇಗೌಡ ಪುತ್ರಿ ಅಂತಲೇ ಈಗಲು ಅಭಿಮಾನಿಗಳಿಂದ ಕರೆಯಿಸಿಕೊಳ್ತಾರೆ. ಅಲ್ಲದೇ, ತಮ್ಮ ಸಹ ನಾಯಕ ನಟಿಯರಿಗೆ ಪೈಪೋಟಿ ನೀಡ್ತಿದ್ದಾರೆ. ಹಾಟ್ ಬ್ಯೂಟಿಯಾಗಿ ಸೌಂದರ್ಯಕ್ಕೆ ಯುವ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಹೆಬ್ಬಾ ಕೈಯಲ್ಲಿ ಎರಡ್ಮೂರು ಸಣ್ಣ ಚಿತ್ರಗಳಿವೆ ಎನ್ನಲಾಗಿದೆ. ನಟಿ ಹೆಬ್ಬಾ ಪಟೇಲ್ ಅವರಿಗೆ ದೊಡ್ಡ ಬ್ರೇಕ್ ಇಲ್ಲದಿದ್ದರೂ ತಮಿಳು ಮತ್ತು ತೆಲುಗು ಎರಡೂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.