ಮಳೆಗೆ ಪಣತ್ತೂರು ಅಂಡರ್‌ಪಾಸ್ ಜಲಾವೃತ 
ನ್ಯೂಸ್

ಬೆಂಗಳೂರಲ್ಲಿ ಮಳೆ ಅಬ್ಬರ; ಪಣತ್ತೂರು ರೈಲ್ವೇ ಅಂಡರ್‌ಪಾಸ್ ಜಲಾವೃತ, ವಾಹನ ಸವಾರರು ಹೈರಾಣು! Bengaluru Rain

ಬೆಂಗಳೂರಲ್ಲಿ ಮಳೆ ಅಬ್ಬರಕ್ಕೆ ಪಣತ್ತೂರು ರೈಲ್ವೇ ಅಂಡರ್‌ಪಾಸ್ ಜಲಾವೃತವಾಗಿದೆ. ರಸ್ತೆ ತುಂಬೆಲ್ಲ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ನೀರು ತೆರವು ಕಾರ್ಯಾಚರಣೆ ನಡುವೆಯೇ ಭಾರೀ ಟ್ರಾಫಿಕ್ ಜಾಮ್ ಆಗಿದೆ.

ಮಂಜುನಾಥ್ ಹಾಲವರ್ತಿ

ಮಳೆಗೆ ಪಣತ್ತೂರು ಅಂಡರ್‌ಪಾಸ್‌ ಮತ್ತೆ ಜಲಾವೃತ

ನೀರು ರಸ್ತೆಯಲ್ಲಿ ತುಂಬಿ ವಾಹನ ಸವಾರರ ಪರದಾಟ

ಮಳೆ ನೀರು ತೆರವು ಮಾಡಲು ಬಂತು ಜೆಸಿಬಿ

Bengaluru Rain: ರಾಜಧಾನಿಯಲ್ಲಿ ಮಳೆ ಜೋರಾಗುತ್ತಿದ್ದಂತೆ ಪಣತ್ತೂರು ರೈಲ್ವೇ ಅಂಡರ್‌ಪಾಸ್‌ನಲ್ಲಿ ಮತ್ತೆ ನೀರು ನಿಂತಿದೆ. ಜಲಾವೃತ ರಸ್ತೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನಗಳ ಸಂಚಾರ ನಿಧಾನಗೊಂಡಿದ್ದು, ಸುತ್ತಮುತ್ತ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ. ಪಣತ್ತೂರು ಅಂಡರ್‌ಬ್ರಿಡ್ಜ್‌ನಲ್ಲಿ ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುವುದು ಈ ಭಾಗದ ಹಳೆಯ ಸಮಸ್ಯೆಯಾಗಿದೆ.

ನೀರು ತೆರವುಗೊಳಿಸಲು ಜೆಸಿಬಿ

ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರು ತೆರವುಗೊಳಿಸಲು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ನೀರು ತುಂಬಿದ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದ್ದು, ಕೆಲ ಸವಾರರು ಪರ್ಯಾಯ ಮಾರ್ಗದ ಮೊರೆ ಹೋಗಿದ್ದಾರೆ.

ಜೆಸಿಬಿ ನೋಡಲು ವಾಹನಗಳ ಸಾಲು

ಅಂಡರ್‌ಪಾಸ್‌ನಲ್ಲಿ ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದ್ದರೂ ವಾಹನಗಳ ದಟ್ಟಣೆ ಕಡಿಮೆಯಾಗಿಲ್ಲ. ನೀರು ತುಂಬಿದ ರಸ್ತೆಯಲ್ಲಿ ಸಾಗಲು ಹಾಗೂ ಜೆಸಿಬಿ ಕಾರ್ಯಾಚರಣೆಯ ಸ್ಥಳದ ಬಳಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ

ಇದನ್ನೂ ಓದಿ: ಸಿಕ್ಕಿಂನಲ್ಲಿ ಪ್ರಕೃತಿಯ ಪವಾಡ: ಒಂದೇ ಸೀಸನ್‌ನಲ್ಲಿ 5 ರೆಡ್ ಪಾಂಡಾ, 2 ಕರಡಿ, 4 ಗೊರಲ್ ಮರಿಗಳ ಜನನ! | Sikkim Red Panda

ಪಣತ್ತೂರು ಮಾರ್ಗವು ಗಂಜೂರು, ವರ್ತೂರು ಹಾಗೂ ಹೊರವರ್ತುಲ ರಸ್ತೆ (ORR) ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಹೀಗಾಗಿ ಇಲ್ಲಿ ಮಳೆ ನೀರು ನಿಂತರೆ ವಾಹನ ಸಂಚಾರದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.