Heavy Rains: ಸಿಕ್ಕಿಂನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದಾಗಿ ಪ್ರಮುಖ ರಸ್ತೆಗಳ ಮೇಲೆ ಭೂಕುಸಿತವಾಗಿದೆ. ಈ ಹಿನ್ನೆಲೆ ರಾಜ್ಯಾದ್ಯಂತ 1500ಕ್ಕೂ ಅಧೀಕ ಪ್ರವಾಸಿಗರು ಸಿಲುಕೊಂಡಿದ್ದಾರೆ.ಅಲ್ಲದೆ, ತೀಸ್ತಾ ನದಿ ಉಕ್ಕಿ ಹರಿಯುತ್ತಿರುವುದರಿಂದ 8 ನಾಪತ್ತೆಯಾಗಿದ್ದಾರೆ ಎಂದು ಭಾನುವಾರ ವರದಿಯಾಗಿದೆ.
ತೀಸ್ತಾನದಿ ನೀರಿನಮಟ್ಟ ಏರಿಕೆ ಹಾಗೂ ನಿರಂತರ ಮಳೆ ಹಿನ್ನೆಲೆ ನಾಪತ್ತೆಯಾದವರ ಹುಡುಕಾಟದ ಕಾರ್ಯಚರಣೆ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಕಾಣೆಯಾದವರಲ್ಲಿ ಓಡಿಶಾದ ನಾಲ್ವರು (ಅಜಿತ್ ಕುಮಾರ್ ನಾಯಕ್, ಸುನಿತಾ ನಾಯಕ್, ಸಾಹಿಲ್ ಜೆನಾ, ಇತ್ಶಿರಿ ಜೆನಾ), ತ್ರಿಪುರದ ಇಬ್ಬರು (ದೇಬ್ಜ್ಯೋತಿ ಜಾಯ್ ದೇವ್, ಸ್ವಪ್ನನಿಲ್ ದೇಬ್) ಮತ್ತು ಉತ್ತರ ಪ್ರದೇಶದ ಇಬ್ಬರು (ಕೌಶಲೇಂದ್ರ ಪ್ರತಾಪ್ ಸಿಂಗ್, ಅಂಕಿತಾ ಸಿಂಗ್) ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಲಾಚೆನ್‌ನಲ್ಲಿ 115 ಸುಸಜ್ಜಿತ ಮತ್ತು ಲಾಚುಂಗ್‌ನಲ್ಲಿ 1,350 ಜನರು ಸಿಲುಕಿಕೊಂಡಿದ್ದಾರೆ. ಹಲವಾರು ಸ್ಥಳಗಳಲ್ಲಿ ಭೂಕುಸಿತದಿಂದಾಗಿ ಎರಡು ದಿಕ್ಕುಗಳ ನಿರ್ಗಮನದಿಂದ ಮುಚ್ಚಲ್ಪಟ್ಟಿದೆ. ಹೀಗಾಗಿ, ತಮ್ಮ ಹೋಟೆಲ್‌ಗಳಲ್ಲಿ ಉಳಿಯಲು ಸೂಚಿಸಲಾಗಿದೆ ಮತ್ತು ರಸ್ತೆಗಳು ಸಂಪೂರ್ಣವಾಗಿ ತೆರೆದ ನಂತರ ಅವರನ್ನು ಸ್ಥಳಾಂತರಿಸಲಾಗುವುದು" ಎಂದು ಮಂಗನ್ ಎಸ್‌ಪಿ ಸೋನಮ್ ಡೆಚು ಭುಟಿಯಾ ತಿಳಿಸಿದ್ದಾರೆ.(ಏಜೆನ್ಸೀಸ್)