ನ್ಯೂಸ್

ಜಮ್ಮುವಿನಲ್ಲಿ ಮಳೆ ಅಬ್ಬರ: ಮತ್ತೊಂದು ಸೇತುವೆ ಕುಸಿತ: 9 ಕ್ಕೇರಿದ ಸಾವಿನ ಸಂಖ್ಯೆ | Heavy Rains

Heavy Rains: ಜಮ್ಮು-ಕಾಶ್ಮೀರದಲ್ಲಿ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಮಂಗಳವಾರ ದೋಡಾದಲ್ಲಿ ನಾಲ್ಕು ಮತ್ತು ವೈಷ್ಣೋದೇವಿ ಯಾತ್ರೆ ಮಾರ್ಗದಲ್ಲಿ ಐದು ಸೇರಿದಂತೆ ಕನಿಷ್ಠ 9 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಮಳೆಯಿಂದ ಉಂಟಾದ ಭೂಕುಸಿತಗಳು ಮತ್ತು ಮಣ್ಣು ಕುಸಿತದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ರಸ್ತೆಗಳು ಬಂದ್​ ಆಗಿವೆ. ಏತನ್ಮಧ್ಯೆ, ಭಗವತಿ ನಗರ ಕಡೆಯಿಂದ ನಾಲ್ಕನೇ ಸೇತುವೆ ಕುಸಿದಿದೆ.

ಭಾರೀ ಮಳೆ ಮತ್ತು ಭೂಕುಸಿತದ ಅಪಾಯದಿಂದಾಗಿ ವೈಷ್ಣೋ ದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್‌ನ ವಿಪತ್ತು ನಿರ್ವಹಣಾ ತಂಡಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿವೆ. ಹಿಮಕೋಟಿ ಮಾರ್ಗದಲ್ಲಿ ಖಾಸಗಿಬ್ಯಾಟರಿ ಕಾರ್ ಸೇವೆ ಮತ್ತು ಹೆಲಿಕಾಪ್ಟರ್ ಸೇವೆಯನ್ನು ನಿಲ್ಲಿಸಲಾಗಿದೆ.

ಅಪಾಯದ ಮಟ್ಟ ಮೀರಿದ ನದಿಗಳು

ಕಥುವಾದಲ್ಲಿ ತಾರಾನಾ ನದಿ, ಉಜ್ ನದಿ, ಮಗ್ಗರ್ ಖಾದ್, ಸಹರ್ ಖಾದ್, ರಾವಿ ನದಿ ಮತ್ತು ಅವುಗಳ ಉಪನದಿಗಳಲ್ಲಿ ನೀರಿನ ಮಟ್ಟ ಏಕಕಾಲದಲ್ಲಿ ಏರುತ್ತಿದ್ದು, ಅಪಾಯದ ಮಟ್ಟವನ್ನು ಸಮೀಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)