ತರೀಕೆರೆ ತಾಲೂಕು ಹಾದಿಕೆರೆಯಲ್ಲಿ ಸುರಿದ ಮಳೆಗೆ ಜಮೀನಿನಲ್ಲಿ ನೀರು ನಿಂತಿರುವುದು. 
ನ್ಯೂಸ್

ತರೀಕೆರೆಯಲ್ಲಿ ಭರ್ಜರಿ ಮಳೆ

ತರೀಕೆರೆ: ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಭರ್ಜರಿ ಮಳೆಯಾಗಿದೆ. ಮಧ್ಯಾಹ್ನ 1.35ರ ಸುಮಾರಿಗೆ ಗುಡುಗು ಸಹಿತ ಆರಂಭವಾದ ಮಳೆ ಒಂದು ತಾಸಿಗೂ ಹೆಚ್ಚು ಎಡೆಬಿಡದೆ ಸುರಿಯಿತು. ಅಮೃತಾಪುರ, ಹಾದಿಕೆರೆ, ಲಕ್ಷ್ಮೀಸಾಗರ, ಕುಂಟಿನಮಡು, ನಾಗೇನಹಳ್ಳಿ, ಪಿರಮೇನಹಳ್ಳಿ, ಯರೇಹಳ್ಳಿ, ಕಟ್ಟೇಹೊಳೆ, ಇಟ್ಟಿಗೆ, ಲಕ್ಕೇನಹಳ್ಳಿ, ಹಿರೇಕಾತೂರು, ಎಚ್.ತಿಮ್ಮಾಪುರ, ಬೇಲೇನಹಳ್ಳಿ, ಎ.ರಾಮನಹಳ್ಳಿ, ಬೇಲೇನಹಳ್ಳಿ ತಾಂಡ, ಬಿ.ರಾಮನಹಳ್ಳಿ, ಎ.ರಂಗಾಪುರ ಮತ್ತಿತರ ಕಡೆ ಮಳೆಯಾಯಿತು. ಹಾದಿಕೆರೆ, ಲಕ್ಷ್ಮೀಸಾಗರ, ಎ ಮತ್ತು ಬಿ.ರಾಮನಹಳ್ಳಿ ಗ್ರಾಮಗಳ ಹೊಲ, ಗದ್ದೆ, ರಸ್ತೆಗಳಲ್ಲಿ ನೀರು ಹರಿದು ತಂಪಾದ ವಾತಾವರಣ ಸೃಷ್ಟಿಯಾಯಿತು.