ನ್ಯೂಸ್

ಮೈಸೂರಿನಲ್ಲಿ ಜು.31 ರಿಂದ ಆ.2ರವರೆಗೆ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಮೈಸೂರು: ಜಿಲ್ಲೆಯಲ್ಲಿ ಮುಂಗಾರು ಆರ್ಭಟಿಸಲು ಪ್ರಾರಂಭಿಸಿದ್ದು, ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜು.31 ರಿಂದ ಆ.2ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆಯಾಗಲಿದ್ದು, ಆ ನಂತರ ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗಾಳಿಯು ಗಂಟೆಗೆ 14 ರಿಂದ 18 ಕಿ.ಮೀ. ವೇಗದಲ್ಲಿ ಬೀಸಲಿದೆ. ಕನಿಷ್ಠ 15 ರಿಂದ 16 ಡಿಗ್ರಿ ಸೆಲ್ಸಿಯಸ್, ಗರಿಷ್ಠ 24 ರಿಂದ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಜು.31 ರಂದು 57 ಮಿ.ಮೀ., ಆ.1 ರಂದು 64 ಮಿ.ಮೀ., 2 ರಂದು 48 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಲೂಕುವಾರು ವಿವರ: ಎಚ್.ಡಿ. ಕೋಟೆ ತಾಲೂಕಿನಲ್ಲಿ ಜು.31 ರಂದು 3.6 ಮಿ.ಮೀ., ಆ.1 ರಂದು 22.7 ಮಿ.ಮೀ., 2 ರಂದು 15 ಮಿ.ಮೀ., ಹುಣಸೂರು ತಾಲೂಕಿನಲ್ಲಿ ಜು.31 ರಂದು 6.2 ಮಿ.ಮೀ., ಆ.1 ರಂದು 17.2 ಮಿ.ಮೀ., 2 ರಂದು 17.7 ಮಿ.ಮೀ., ಕೆ.ಆರ್. ತಾಲೂಕಿನಲ್ಲಿ ಜು.31 ರಂದು 6.8 ಮಿ.ಮೀ., ಆ.1 ರಂದು 7.4 ಮಿ.ಮೀ., 2 ರಂದು 14.6 ಮಿ.ಮೀ., ಮೈಸೂರು ತಾಲೂಕಿನಲ್ಲಿ ಜು.31 ರಂದು 9.9 ಮಿ.ಮೀ., ಆ.1 ರಂದು 19.8 ಮಿ.ಮೀ., 2 ರಂದು 16.5 ಮಿ.ಮೀ., ನಂಜನಗೂಡು ತಾಲೂಕಿನಲ್ಲಿ ಜು.31 ರಂದು 12.9 ಮಿ.ಮೀ., ಆ.1 ರಂದು 19 ಮಿ.ಮೀ., 2 ರಂದು 12.8 ಮಿ.ಮೀ., ಪಿರಿಯಾಪಟ್ಟಣ ತಾಲೂಕಿನಲ್ಲಿ ಜು.31 ರಂದು 8.3 ಮಿ.ಮೀ., ಆ.1 ರಂದು 25.4 ಮಿ.ಮೀ., 2 ರಂದು 23.7 ಮಿ.ಮೀ., ತಿ.ನರಸೀಪುರ ತಾಲೂಕಿನಲ್ಲಿ ಜು.31 ರಂದು 8.5 ಮಿ.ಮೀ., ಆ.1 ರಂದು 19.9 ಮಿ.ಮೀ., 2 ರಂದು 13.9 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.