ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಗದ್ದೆಯ ಮೇಲೆ ನೀರು ಹರಿಯುತ್ತಿರುವುದು. 
ನ್ಯೂಸ್

ಕೆರೆ ಕೋಡಿ ಒಡೆದು ಗದ್ದೆಗೆ ಹಾನಿ

ಜಿ. ಗಜೇಂದ್ರ

ಬಾಳೆಹೊನ್ನೂರು: ಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಸುರಿದ ಮಳೆಗೆ ಹಲಸೂರು ಗ್ರಾಮದಲ್ಲಿ ಕೆರೆ ಕೋಡಿ ಒಡೆದು ಗದ್ದೆಗೆ ಹಾನಿಯಾಗಿದೆ. ಹಲಸೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಉಮೇಶ್ ಎಂಬುವರ ಗದ್ದೆಯನ್ನು ಇತ್ತೀಚೆಗೆ ನಾಟಿ ಮಾಡಿದ್ದು ಭಾನುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಕೋಡಿ ಒಡೆದು ಕೆರೆಯ ನೀರು ಸಂಪೂರ್ಣವಾಗಿ ಗದ್ದೆಗೆ ನುಗ್ಗಿದೆ. ಇದರಿಂದಾಗಿ ನಾಟಿ ಮಾಡಿದ್ದ ಭತ್ತದ ಸಸಿಗಳೆಲ್ಲ ನೀರಿನಲ್ಲಿ ಕೊಚ್ಚಿಹೋಗಿದೆ. ಪಟ್ಟಣದ ಕಗ್ಗನಗದ್ದೆ, ವಿವೇಕನಗರದಲ್ಲೂ ಧಾರಾಕಾರ ಮಳೆಗೆ ನೀರು ಗದ್ದೆಗೆ ನುಗ್ಗಿ ಹಾನಿಯಾಗಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.