ತಮಿಳುನಾಡು: ಕಳೆದ ಒಂದೆರೆಡು ದಿನಗಳಿಂದ ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಮೈಚಾಂಗ್ ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಅದರೊಟ್ಟಿಗೆ ಸೆಕ್ಷನ್ 144 ಕೂಡ ಜಾರಿ ಮಾಡಲಾಗಿತ್ತು. ಚಂಡಮಾರುತದ ಪರಿಣಾಮ ತಮಿಳುನಾಡಿನ ಚೆನ್ನೈನಲ್ಲಿ ಸುರಿದ ನಿರಂತರ ಮಳೆಗೆ ನಗರ ಪ್ರದೇಶಗಳು ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಇದೀಗ ಭಾರತೀಯ ಹವಾಮಾನ ಇಲಾಖೆ ಹೊಸ ಪ್ರಕಟಣೆ ಹೊರಡಿಸಿದ್ದು, ಡಿಸೆಂಬರ್ 08 ಹಾಗೂ 09 ರಂದು ಎರಡು ರಾಜ್ಯಗಳಿಗೆ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿದೆ.
ಮೈಚಾಂಗ್ ಚಂಡಮಾರುತದ ಹೊಡೆತಕ್ಕೆ ತಮಿಳುನಾಡು ಈಗಾಗಲೇ ಸಿಲುಕಿದ್ದು, ಸದ್ಯ ಮುಂದಿನ ಎರಡು ದಿನಗಳ ಕಾಲ ಕೇರಳದಲ್ಲಿಯೂ ಸಹ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಡಿಸೆಂಬರ್ 08 ಮತ್ತು 09 ರಂದು ಮೇಲ್ಕಂಡ ಎರಡು ರಾಜ್ಯಗಳಲ್ಲಿ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ‘ಪೊಮ್ಮಾಲೆ ಕೊಡಗ್’ಗೆ ಮತ್ತೊಂದು ಪ್ರಶಸ್ತಿ
ಈಗಾಗಲೇ ಚಂಡಮಾರುತದ ಎಫೆಕ್ಟ್ಗೆ ತತ್ತರಿಸಿರುವ ಚೆನ್ನೈ ನಿವಾಸಿಗಳು, ಅದರಿಂದ ಉಂಟಾದ ತೊಂದರೆಗಳಿಂದ ಇನ್ನೂ ಹೊರಬಂದಿಲ್ಲ. ಈ ಮಧ್ಯೆ ಮುಂದಿನ ಎರಡು ದಿನಗಳು ಭಾರೀ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಎಚ್ಚರಿಕೆ ಮತ್ತಷ್ಟು ಚಿಂತೆಗೆ ದೂಡಿದೆ! ಸದ್ಯದ ವರದಿಯ ಪ್ರಕಾರ, ನಗರದ ಜನರು ತೀವ್ರ ಜಲಕ್ಷಾಮ, ವಿದ್ಯುತ್ ಬಿಕ್ಕಟ್ಟು ಮತ್ತು ಹಾಲಿನ ಕೊರತೆಯಿಂದ ಪರದಾಡುತ್ತಿದ್ದಾರೆ,(ಏಜೆನ್ಸೀಸ್).