ಮೃತ ಅಣ್ಣಮ್ಮ 
ನ್ಯೂಸ್

ಸಿಲಿಕಾನ್ ಸಿಟಿಯಲ್ಲೊಂದು‌ ಹೃದಯ ವಿದ್ರಾವಕ ಘಟನೆ: ತಾಯಿ‌ ಶವದೊಂದಿಗೆ 2 ದಿನ ಕಳೆದ 14 ವರ್ಷದ ಬಾಲಕ

ಬೆಂಗಳೂರು: ಹದಿನಾಲ್ಕು ವರ್ಷದ ಬಾಲಕನೊಬ್ಬ ತಾಯಿಯ ಶವದೊಂದಿಗೆ ಎರಡು ದಿನ ಕಳೆದ ಹೃದಯ ವಿದ್ರಾವಕ ಘಟನೆ ಸಿಲಿಕಾನ್​ ಸಿಟಿಯ ಆರ್.ಟಿ.ನಗರ ಠಾಣಾ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನದ ಬಳಿ ನಡೆದಿದೆ.

ಅಣ್ಣಮ್ಮ (44) ಮೃತ ಮಹಿಳೆ. ಲೋ ಬಿಪಿ ಮತ್ತು ಶುಗರ್​ನಿಂದಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಫೆಬ್ರವರಿ 26 ರಂದೇ ಮನೆಯಲ್ಲಿ ಮಲಗಿದ್ದಾಗಲೇ ಅಣ್ಣಮ್ಮ ಅಸುನೀಗಿದ್ದಾರೆ. ಫೆಬ್ರವರಿ 28ರ ವರೆಗೆ ಬಾಲಕ ತಾಯಿಯ ಶವ ಶವದ ಜೊತೆಗೆ ಇದ್ದ. ಹೊರಗೆ ಬಂದು ಊಟ, ತಿಂಡಿ‌ ತೆಗೆದುಕೊಂಡು‌ ಮನೆ ಸೇರಿಕೊಳ್ತಿದ್ದ‌‌.

ರಾತ್ರಿಯೆಲ್ಲ ತಾಯಿಯ ಜೊತೆಯಲ್ಲೇ ಮಲಗಿ ಕಾಲ‌ ಕಳೆಯುತ್ತಿದ್ದ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಆತ ಹೇಳಲೇ ಇಲ್ಲ. ನಂತರ ತಂದೆ ಸ್ನೇಹಿತರಿಗೆ ತಾಯಿ ಮಾತನಾಡ್ತಿಲ್ಲ ಎಂದು ಹೇಳಿದ್ದ. ಬಂದು‌ ನೋಡಿದಾಗ ಮೃತಪಟ್ಟಿರುವ ವಿಚಾರ ಗೊತ್ತಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಮೃತಪಟ್ಟಿದ್ದ. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು. (ದಿಗ್ವಿಜಯ ನ್ಯೂಸ್​)