Viral Video: ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಶಿಪ್‌ನಲ್ಲಿ ಆಟವಾಡುತ್ತಿದ್ದ ಆಟಗಾರನಿಗೆ ಹೃದಯಘಾತವಾಗಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ನಾನು ಒಬ್ಬ ಸೂಪರ್ಸ್ಟಾರ್ನ ಪತ್ನಿ ಆದರೂ ತಾರತಮ್ಯ ಎದುರಿಸುತ್ತಿರುವೆ; ನಟಿ ಜ್ಯೋತಿಕಾ ಹೀಗೇಳಿದ್ದೇಕೆ? | Jyotika
ವುಶು ಆಟಗಾರ (ಮಾರ್ಷಲ್ ಆರ್ಟ್ಸ್) ಮೋಹಿತ್ ಶರ್ಮಾ(21) ಮೃತ. ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಾಪೆಯ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣ ವೈದ್ಯರು ಆರೈಕೆಯ ಮಾಡಿದ್ದಾರದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ.
ಸಾವಿಗೆ ನಿಖರವಾದ ಕಾರಣವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ, ಇದು ಹೃದಯ ಸಮಸ್ಯೆ ಅಥವಾ ಇತರ ಆಧಾರವಾಗಿರುವ ವೈದ್ಯಕೀಯ ಸ್ಥಿತಿಗೆ ಸಂಬಂಧಿಸಿದೆ ಎಂದು ವರದಿಯಾಗಿದೆ.(ಏಜೆನ್ಸೀಸ್)