ನ್ಯೂಸ್

ಮದುವೆ ಮನೆಯಲ್ಲಿ ನೃತ್ಯ ಮಾಡುವಾಗ ವರ ಹೃದಯಾಘಾತದಿಂದ ಸಾವು! Heart Attack Video

ಉತ್ತರಪ್ರದೇಶ:  ( Heart Attack Video ) ಕುಟುಂಬ ಸದಸ್ಯರೊಂದಿಗೆ ಮದುವೆ ಮನೆಯಲ್ಲಿ ಸಂತೋಷದಿಂದ ನೃತ್ಯ ಮಾಡುವಾಗ ವರ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಈ ದಾರುಣ ಘಟನೆ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹತ್ರಾಸ್‌ನ ಭೋಜ್‌ಪುರ ಗ್ರಾಮದ 22 ವರ್ಷದ ಶಿವಂ ಶಾಲೆಯೊಂದರಲ್ಲಿ ಕಂಪ್ಯೂಟರ್ ಕೋರ್ಸ್ ಅನ್ನು ಕಲಿಸುತ್ತಿದ್ದನು. ಆಗ್ರಾದ ನಿವಾಸಿ ಮೋಹಿನಿಯೊಂದಿಗೆ ಶಿವಂ ಅವರ ಮದುವೆ ನಿಶ್ಚಯವಾಗಿತ್ತು.

ನಾಳೆ ಮದುವೆ ಎಂದೆ ಇವತ್ತು ಶಿವಂ ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ನೃತ್ಯ ಮಾಡಿದರು. ಸುಸ್ತಾಗಿ ಹೋಗಿ ಕುಳಿತರು. ಇದೇ ವೇಳೆ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದಿದ್ದಾನೆ. ಮನೆಯವರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಶಿವಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದಾಗ ಪೋಷಕರು ಮತ್ತು ಸಂಬಂಧಿಕರು ನಂಬಲಿಲ್ಲ. ಮನೆಯವರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಇಲ್ಲಿಯೂ ಶಿವ ಸತ್ತಿದ್ದಾನೆ ಎಂದು ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಮದುವೆಗೂ ಮುನ್ನವೇ ಶಿವಂ ಮೃತಪಟ್ಟಿದ್ದು, ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.