ರಾಣೆಬೆನ್ನೂರ: ಹೃದಯಾಘಾತದಿಂದ ನಿಧನ ಹೊಂದಿದ ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದ ಯೋಧ ಶಿವಪ್ಪ ಶಂಕ್ರಪ್ಪ ವಡತೇರ (48) ಎಂಬುವರ ಅಂತ್ಯ ಸಂಸ್ಕಾರ ಮಂಗಳವಾರ ಸಕಲ ಸರ್ಕಾರಿ ಗೌರವದೊಂದಿಗೆ ಸ್ವಗ್ರಾಮದಲ್ಲಿ ನೆರವೇರಿತು.
ಇವರು ಚತ್ತೀಸ್ಗಡದ ಇಂಡೋ ಟಿಬೆಟಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆ ನಿಮಿತ್ತ ಸ್ವಗ್ರಾಮಕ್ಕೆ ಬಂದಿದ್ದರು. ಸೋಮವಾರ ಏಕಾಏಕಿ ಸಂಭವಿಸಿದ ಹೃದಯಾಘಾತದಿಂದ ಅವರನ್ನು ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದರು.
ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ…
ಮೃತಪಟ್ಟ ಯೋಧ ಶಿವಪ್ಪ ಅವರ ಪಾಥಿರ್ವ ಶರೀರವನ್ನು ದಾವಣಗೆರೆಯಿಂದ ನೇರವಾಗಿ ನಗರದ ಗ್ರಾಮೀಣ ಠಾಣೆ ಆವರಣಕ್ಕೆ ತರಲಾಯಿತು. ಅಲ್ಲಿ ಪೂಜೆ ಸಲ್ಲಿಸಿ ನಂತರ ಸ್ವ ಗ್ರಾಮ ವೈ.ಟಿ. ಹೊನ್ನತ್ತಿ ಕೊಂಡೋಯ್ಯಲಾಯಿತು. ಗ್ರಾಮದಲ್ಲಿ ಪಾಥಿರ್ವ ಶರೀರವನ್ನು ಟ್ರಾ$್ಯಕ್ಟರ್ನಲ್ಲಿ ಇರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಉಪಸಭಾಪತಿ ರುದ್ರಪ್ಪ ಲಮಾಣಿ ಗ್ರಾಮಕ್ಕೆ ಆಗಮಿಸಿ ಯೋಧನ ಪಾಥಿರ್ವ ಶರೀರಕ್ಕೆ ಪುಷ್ಪ ಗುಚ್ಚ ಸಲ್ಲಿಸಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರು, ವಯೋವೃದ್ಧರು ಹಾಗೂ ಮಹಿಳೆಯರು ಸೇರಿ ಗ್ರಾಮದ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಯೋಧನ ಪಾಥಿರ್ವ ಶರೀರಕ್ಕೆ ಪುಷ್ಪ ಹಾಕಿ ಅಂತಿಮ ನಮನ ಸಲ್ಲಿಸಿದರು.
ಸಾರ್ವಜನಿಕರ ದರ್ಶನದ ಬಳಿಕ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ ಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು. ತಹಸೀಲ್ದಾರ್ ಆರ್.ಎಚ್. ಭಾಗವಾನ ಹಾಗೂ ಸೈನ್ಯದ ತುಕಡಿಗಳು, ವಿವಿಧ ಇಲಾಖೆಯ ಅ-ಧಿಕಾರಿಗಳು ಇದ್ದರು.
ಇಡೀ ಗ್ರಾಮವೇ ಶೋಕದಲ್ಲಿ…
ಯೋಧನ ಪಾಥಿರ್ವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಅಲ್ಲದೆ ಗ್ರಾಮಸ್ಥರು ದುಃಖದ ಮಡಿಲಲ್ಲಿದ್ದರು. ಇಡೀ ಗ್ರಾಮವೇ ಮೌನವಾತಾವರಣ ಆವರಿಸಿತ್ತು. ಮೃತ ಯೋಧನಿಗೆ ತಾಯಿ ಚಂದ್ರಮ್ಮ, ಪತ್ನಿ ಅನಿತಾ ಹಾಗೂ ಪುತ್ರ ಉಜ್ವಲ, ಪುತ್ರಿ ಖುಷಿ ದುಖಃ ಮುಗಿಲು ಮುಟ್ಟಿತ್ತು.
ಅಪ್ಪ ಬೇಕು ಅಂತಾ ಹಠ ಹಿಡಿದ ಮಗಳು…
ಯೋಧನ ಪಾಥಿರ್ವ ಶರೀರ ಮನೆಗೆ ಬರುತ್ತಿದ್ದಂತೆ ಯೋಧನ ಪುಟ್ಟ ಮಗಳಾದ ಖುಷಿ ನನಗೆ ಅಪ್ಪ ಬೇಕು. ಎದ್ದೇಳು ಅಂತಾ ಹೇಳು ಮಮ್ಮಿ ಎಂದು ಗೋಳಾಡಿ ಕಣ್ಣೀರು ಹಾಕಿದ ದೃಶ್ಯ ನೆರದವರ ಕಣ್ಣನ್ನು ತೇವವಾಗಿಸಿತು. ಅಲ್ಲದೆ ಶಾಲಾ ಮಕ್ಕಳು ದುಃಖದ ಮಡುವಿನಲ್ಲಿಯೇ ಯೋಧನ ಪಾಥಿರ್ವ ಶರೀರಕ್ಕೆ ಪುಷ್ಪ ಹಾಕಿ ನಮನ ಸಲ್ಲಿಸಿ ಭಾರತ ಮಾತಾ ಕಿ ಜೈ.. ಜೈ ಜೈವಾನ್ ಜೈ ಕಿಸಾನ್ ಎಂದು ೂಷಣೆ ಕೂಗಿದರು.