ನ್ಯೂಸ್

‘ಮುಡಾ ಕೆೇಸ್’ ಇಡಿ ತಕರಾರು ಅರ್ಜಿ ವಿಚಾರಣೆ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ಏ.8ಕ್ಕೆ ಮುಂದೂಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿ ಇತರರ ವಿರುದ್ಧದ ಪ್ರಕರಣ ಸಂಬಂಧ ಮೈಸೂರು ಲೋಕಾಯುಕ್ತ ಅಧಿಕಾರಿಗಳು, ೆ.20ರಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಾಕ್ಷಾೃಧಾರಗಳ ಕೊರತೆ ಇರುವುದಾಗಿ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) 8 ಪುಟಗಳ ತಕರಾರು ಅರ್ಜಿ ಸಲ್ಲಿಸಿತ್ತು.

ಜತೆಗೆ ಪಾರ್ವತಿಗೆ ಸೈಟ್ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯ ಲಭ್ಯವಿವೆ. ವಿಸ್ತೃತ ತನಿಖೆ ಆಗಬೇಕು. ಹೀಗಾಗಿ ಲೋಕಾಯುಕ್ತ ವರದಿಯನ್ನು ತಿರಸ್ಕರಿಸಬೇಕು. ಪಿಎಂಎಲ್‌ಎ-2002ರ ಕಾಯ್ದೆ ಅನ್ವಯ ಹಣ ಅಕ್ರಮ ವರ್ಗಾವಣೆ ಅಲ್ಲದೆ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೂ ಧಕ್ಕೆ ಉಂಟು ಮಾಡುತ್ತದೆ.

ಹಣ ವರ್ಗಾವಣೆ ಅಪರಾಧ ಪ್ರಕರಣದಲ್ಲಿ ಇಡಿಯನ್ನು ‘ಬಾಧಿತರು’ ಎಂದು ವ್ಯಾಖ್ಯಾನದಲ್ಲಿ ಪರಿಗಣಿಸಬೇಕು ಎಂದು ಇಡಿ ಕೋರಿತ್ತು. ಈ ಕುರಿತು ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ, ತಕರಾರು ಅರ್ಜಿ ಸಲ್ಲಿಸಲು ಇಡಿಗೆ ಅಧಿಕಾರವಿಲ್ಲ. ವಾದ ಮಂಡಿಸಲು ನಮಗೆ ಅವಕಾಶ ನೀಡಬೇಕೆಂದು ಕೋರಿದರು. ಹಾಗಾಗಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ.8ಕ್ಕೆ ಮುಂದೂಡಿತು.