ನ್ಯೂಸ್

ಆರೋಗ್ಯ ಉಚಿತ ತಪಾಸಣಾ ಶಿಬಿರ

ಎ. ಆರ್. ರಘುರಾಮ

ಮದ್ದೂರು : ಪಟ್ಟಣದ ರಾಂ ರಹೀಮ್ ನಗರದಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಭಾನುವಾರ ವಿಧಾನ ಪರಿಷತ್ ಸದಸ್ಯ ಮಧುಜಿ.ಮಾದೇಗೌಡರ ಹುಟ್ಟುಹಬ್ಬದ ಅಂಗವಾಗಿ ಆಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಹಾಗೂ ಮಧು ಜಿ.ಮಾದೇಗೌಡ ಅಭಿಮಾನಿಗಳ ಬಳಗದ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಮಾಜಿ ಸದಸ್ಯ ಭರತೇಶ್, ಮಧು ಜಿ.ಮಾದೇಗೌಡರು ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಭಾರತೀ ನಗರದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಆರಂಭಿಸಿ ಗ್ರಾಮಾಂತರ ಪ್ರದೇಶದ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿದ್ದಾರೆ.ವಿಧಾನ ಪರಿಷತ್ ಸದಸ್ಯರಾಗಿ ಹಲವು ಸಮಾಜ ಮುಖಿ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
ಶಿಬಿರದಲ್ಲಿ ಹೃದಯ, ಮೂಳೆ, ಹಲ್ಲು, ಕಿಡ್ನಿ, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳನ್ನು ತಜ್ಞ ವೈದ್ಯರ ತಪಾಸಣೆ ಮಾಡಿದರು. ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಶಿಬಿರ ಪ್ರಯೋಜನ ಪಡೆದುಕೊಂಡರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಅಭಿಮಾನಿಗಳಾದ ಮಾಚಹಳ್ಳಿ ಕುಮಾರ್, ಶ್ರೀಧರ್, ಯೋಗೇಶ್, ಕಬ್ಬಾಳಯ್ಯ, ಯಶವಂತ್, ಅಭಿಷೇಕ್, ಎಸ್.ಸಿ.ರಮೇಶ್, ಛಲವಾದಿ ಮಹಾಸಭಾದ ನಾಗಭೂಷಣ್, ಮಾದೇವಯ್ಯ, ಸುಮಾವತಿ, ಯೋಗೇಶ್, ಪ್ರಸನ್ನ, ಡಾ.ಪ್ರಶಾಂತ್‌ಕುಮಾರ್, ಡಾ.ಮೌರ್ಯ, ಡಾ.ಶ್ವೇತಾ, ಡಾ.ಶ್ರುತಿ, ಡಾ.ಶಿಲ್ಪಶ್ರೀ ಇದ್ದರು.