ಬೆಂಗಳೂರು: ಇಂದಿರಾ ಕ್ಯಾಂಟೀನ್ ಎಂದು ಹೆಸರಿಡಬೇಕು ಎಂದು ಇದೇ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಅವರು ಹಠ ಮಾಡಿ 40 ಜನ ಎಂಎಲ್‌ಎಗಳ ಸಹಿ ಹಾಕಿಸಿ ಕೊಟ್ಟಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು ಕ್ಷೇತ್ರಗಳ ಜನರ ಮನೆಯ ಮೇಲೆ ಕಾಂಗ್ರೆಸ್ ಧ್ವಜದ ಚಿತ್ರಗಳನ್ನು ಹಾಕಿಸಿದ್ದರು. ಈಗ ಪೂರ್ತಿ ಕೇಸರಿ ಬಣ್ಣ ಬಳಿದಿದ್ದಾರೆ ಎಂದು ಇದೇ ವೇಳೆ ಹಾಸ್ಯ ಮಾಡಿದರು.
ಸೋಮಶೇಖರ್ ನನ್ನ ಸ್ನೇಹಿತ, ಚುನಾವಣೆಗೆ ಮುನ್ನ ಬಹಳಷ್ಟು ಬಾರಿ ಆಹ್ವಾನ ನೀಡಿದ್ದೆ. ಯಾವುದೋ ಕಾರಣ, ಒತ್ತಡಕ್ಕೆ ಬಂದಿರಲಿಲ್ಲ ಎಂದು ಸೂಚ್ಯವಾಗಿ ಮುಂದಿನ ಬೆಳವಣಿಗೆಯನ್ನು ತಿಳಿಸಿದರು.