ನ್ಯೂಸ್

ಪ್ರೇಯಸಿ ಮೇಲಿನ ಬೇಸರಕ್ಕೆ ಕೋಳಿ ಕದ್ದ!

ವಾಷಿಂಗ್ಟನ್: ಪ್ರೇಯಸಿ ಮೇಲಿನ ಬೇಸರಕ್ಕೆ ಆಕೆ ಸಾಕಿದ್ದ ಕೋಳಿಯನ್ನು ಕದ್ದ ಪ್ರಿಯಕರ ಕೊನೆಗೆ ಪೊಲೀಸರಿಂದ ಬಂಧನಕ್ಕೆ ಒಳಗಾದ ಪ್ರಕರಣ ನಡೆದಿದೆ. ಮಾಜಿ ಪ್ರಿಯಕರ ಹಿತ್ತಿಲ ಬಾಗಿಲನ್ನು ಒದ್ದು ಕೋಳಿಯನ್ನು ಕದ್ದುಕೊಂಡು ಹೋಗಿದ್ದ ಎಂದು ಮಹಿಳೆ ನೀಡಿದ್ದ ದೂರಿನ ಮೇರೆಗೆ ಅಮೆರಿಕದ ವಾಷಿಂಗ್ಟನ್ ಪೊಲೀಸರು ಆತನನ್ನು ಬಂಧಿಸಿದ್ದರು.

ಮಾ.29ರಂದು ಬಂಧನ ನಡೆದಿದ್ದು, ಬಂಧಿತ ಪ್ರಿಯಕರನ ವಿಡಿಯೋ ವೈರಲ್ ಆಗಿದೆ. ಕಿಟ್ಸಾಫ್ ಕೌಂಟಿ ಶೆರಿಫ್ಸ್ ಕಚೇರಿ ಈ ವಿಡಿಯೋ ಹಂಚಿಕೊಂಡಿದೆ. ಕೋಳಿಯನ್ನು ಕದ್ದೊಯ್ದ ಪ್ರಿಯಕರ ಓಡಿಹೋಗಿದ್ದು, ಪ್ರೇಯಸಿ ನೀಡಿದ್ದ ದೂರಿನ ಮೇರೆಗೆ ಹುಡುಕಾಡಿದ ಪೊಲೀಸರಿಗೆ ಅಲ್ಲಿನ ಪೊದೆಗಳ ಮಧ್ಯೆ ಕೋಳಿಯೊಂದಿಗಿದ್ದ ವ್ಯಕ್ತಿ ಕಾಣಿಸಿಕೊಂಡಿದ್ದ. ಪೊಲೀಸರ ಸೂಚನೆ ಮೇರೆಗೆ ಗಸ್ತುವಾಹನದಲ್ಲಿ ಆತ ಕೋಳಿಯನ್ನು ಇಟ್ಟಿದ್ದು, ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಎಲ್ಲ ಘಟನೆಗಳು ಪೊಲೀಸರ ಬಾಡಿಕ್ಯಾಮ್ಲ್ಲಿ ಸೆರೆಯಾಗಿದ್ದವು.