ನ್ಯೂಸ್

ಯಾವುದೇ ವಿಐಪಿ ಸೌಲಭ್ಯ ಬೇಕಿಲ್ಲ! ಮಳೆಯಲ್ಲೇ ಸ್ಕೂಟರ್​ ಹತ್ತಿ ನಿರ್ಮಾಪಕರನ್ನು ಭೇಟಿಯಾದ ದಿಗ್ಗಜ ನಟ ಇವರು | Legend Actor

ಮೋಹನ್​ ಶೆಟ್ಟಿ

Legend Actor: ಚಿತ್ರರಂಗದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಸತತ ಪರಿಶ್ರಮ, ವೃತ್ತಿಯ ಮೇಲಿನ ತುಡಿತ, ಅಚ್ಚುಕಟ್ಟಾದ ಕೆಲಸ, ನಟನೆಯಿಂದ ವಿಶೇಷ ಛಾಪು ಮೂಡಿಸಿದರೆ ಮಾತ್ರ ಇಲ್ಲಿ ಉಳಿದುಕೊಳ್ಳಲು ಮತ್ತು ಬೆಳೆಯಲು ಸಾಧ್ಯ. ಈ ಸಾಲಿನಲ್ಲಿ ಬೆಳೆದು ಬಂದ ಅದೆಷ್ಟೋ ಕಲಾವಿದರ ಪೈಕಿ ದಿಗ್ಗಜರಾಗಿ ಉಳಿದಿರುವುದು ಬೆರಳೆಣಿಕೆಯಷ್ಟು ಮಾತ್ರ. ಇಂದು ವಿಶ್ವದಾದ್ಯಂತ ತಮ್ಮದೇ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿರುವ ಸೂಪರ್​ಸ್ಟಾರ್​ ಎಂದರೆ ಅದು ಒನ್ ಅಂಡ್​ ಒನ್ಲಿ ‘ತಲೈವಾ’, ನಟ ರಜನಿಕಾಂತ್ (Superstar Rajnikanth). ತಮಿಳು ಚಿತ್ರರಂಗದ ಈ ಸ್ಟಾರ್ ನಟ ಅದೊಂದು ದಿನ ಮಾಡಿದ ಕೆಲಸವನ್ನು ಇಂದಿಗೂ ಅವರ ಚಿತ್ರತಂಡ ನೆನಪಿಸಿಕೊಳ್ಳುತ್ತದೆ.

ಭಾರತೀಯ ಚಿತ್ರೋದ್ಯಮದಲ್ಲಿ ದುಬಾರಿ ಮೊತ್ತದ ಸಂಭಾವನೆ ಪಡೆಯುವ ಮೊದಲ ನಟ ರಜನಿಕಾಂತ್. ಅವರಾದ ಬಳಿಕ ಬಾಲಿವುಡ್​ ಬಾದ್​ಶಾ ಶಾರೂಖ್ ಖಾನ್. ಹೀಗಿರುವಾಗ ಅಂದು ನಟ ರಜನಿಕಾಂತ್ ಅವರು ತಮ್ಮ ‘ಮರಟ್ಟು ಕಾಲೈ’ ಸಿನಿಮಾದ ಮಾತುಕತೆ ಕೆಲಸದಲ್ಲಿ ಸಖತ್ ಬ್ಯುಸಿಯಾಗಿದ್ದರು. ಈ ವೇಳೆ ತಲೈವಾ ನಿರ್ಮಾಪಕರನ್ನು ಖದ್ದಾಗಿ ಭೇಟಿಯಾಗುವ ಸನ್ನಿವೇಶ ಎದುರಾಗಿತ್ತು.

ಆದ್ರೆ, ಅಂದು ಬಿರುಸಿನ ಮಳೆಯಿದ್ದ ಕಾರಣ ರಜನಿ ಭೇಟಿ ಬಹುತೇಕ ಅನುಮಾನವಾಗಿತ್ತು. ಬಹಳ ಮುಖ್ಯ ಮಾತುಕತೆ ಅದ್ದಾಗಿದ್ದ ಕಾರಣ ಹಾಗೂ ತಮಗಾಗಿ ಮತ್ತೊಂದು ಸ್ಥಳದಲ್ಲಿ ತಮ್ಮ ಚಿತ್ರದ ನಿರ್ಮಾಪಕರು ಕಾಯುತ್ತಿದ್ದಾರೆ ಎಂಬುದನ್ನು ಅರಿತ ರಜನಿಕಾಂತ್​, ಈ ವಿಷಯದಲ್ಲಿ ತಮ್ಮ ಮ್ಯಾನೇಜರ್​ ಸಲಹೆ ದಿಕ್ಕರಿಸಿ, ತಮಗೆ ಅನಿಸಿದ್ದನ್ನು ಮಾಡುವಲ್ಲಿ ಮುಂದಾಗುತ್ತಾರೆ.

ನಿರ್ಮಾಪಕರಾದ ಎವಿಎಂ ಸರವಣ್ಣನ್ ಅವರನ್ನು ಭೇಟಿಯಾಗಲು ಮಳೆಯನ್ನು ಲೆಕ್ಕಿಸದ ರಜನಿಕಾಂತ್, ತಮ್ಮ ಮ್ಯಾನೇಜರ್​ ಕಾರಿನಲ್ಲಿ ಕರೆದುಕೊಂಡು ಹೋಗುತ್ತೇನೆ. ಇದು ವಿಐಪಿ ಸೌಲಭ್ಯ ಸರ್​ ಎಂದರು ಸಹ ಅದನ್ನು ಒಪ್ಪದೆ ತಾವೇ ಹೊರಡುತ್ತಾರೆ. ನನಗೆ ಯಾವುದೇ ವಿಐಪಿ ಸೌಕರ್ಯವೂ ಬೇಡವೆಂದು ಹೇಳಿ, ಅಲ್ಲೇ ನಿಲ್ಲಿಸಲಾಗಿದ್ದ ಸ್ಕೂಟರ್​ ಹತ್ತಿ ಮಳೆಯ ನಡುವೆಯೇ ಭೇಟಿ ಮಾಡಲು ತೆರಳುತ್ತಾರೆ. ಈ ವಿಷಯವನ್ನು ಹಂಚಿಕೊಂಡ ಚಿತ್ರದ ಕ್ರಿಯೇಟಿವ್ ಪ್ರೊಡ್ಯೂಸರ್​, ರಜನಿಕಾಂತ್ ಅವರ ಸರಳತೆ ಎಲ್ಲರೂ ಮೆಚ್ಚುವಂತದ್ದು. ಈ ಘಟನೆ 80ರ ದಶಕದಲ್ಲಿ ನಡೆದಿದ್ದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).