ನ್ಯೂಸ್

ಪತ್ನಿ ಹತ್ಯೆ ನಂತರ ಪೊಲೀಸರಿಗೆ ಹೆದರಿ ಮನೆಯಲ್ಲೇ ನೇಣಿಗೆ ಶರಣಾದ ಪತಿ

ಲಖನೌ: ಪತ್ನಿಯ ಹತ್ಯೆ ನಡೆದ ನಂತರ ಪರಾರಿಯಾದ ಪತಿ ಮಹಾಶಯನೊಬ್ಬ ಪೊಲೀಸರಿಗೆ ಹೆದರಿ ತಾನೇ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಉತ್ತರ ಪ್ರದೇಶದ ಹಾರ್ದೋಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ವೃತಪಟ್ಟ ಸುರ್ಜಿತ್ (25), ದೆಹಲಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. 2018ರಲ್ಲಿ ವಿವಾಹವಾಗಿ ಹೆಂಡತಿ ರಿಂಕಿಯೊಂದಿಗೆ ಆನಂದ್ ವಿಹಾರದಲ್ಲಿ ನೆಲೆಸಿದ್ದ.

ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ದೆಹಲಿಯ ಅವರ ಮನೆಯಲ್ಲಿ ಶನಿವಾರ ಕೊಲೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆನಂತರ, ದೆಹಲಿ ಪೊಲೀಸರು ಸುರ್ಜಿತನಿಗಾಗಿ ಶೋಧಕಾರ್ಯ ನಡೆಸಿದ್ದರು,

ಪತ್ನಿ ಹತ್ಯೆಯ ನಂತರ ಆತ ಹಾರ್ದೋಯಿಯಲ್ಲಿರುವ ತನ್ನ ಸ್ವಂತ ಊರು ಲೋನಾರ್​​ಗೆ ಪರಾರಿಯಾಗಿದ್ದ. ಈ ಕೊಲೆ ಪ್ರಕರಣದ ಪ್ರಮುಖ ಶಂಕಿತ ಆತನೇ ಆಗಿದ್ದ.

ಮಂಗಳವಾರ, ಸುರ್ಜಿತನ ಸಂಬಂಧಿಯನ್ನು ದೆಹಲಿಯಲ್ಲಿ ವಿಚಾರಣೆಗೆ ಕರೆದೊಯ್ಯಲಾಯಿತು. ನಂತರ ಆತನ ಕುಟುಂಬ ಸದಸ್ಯರು ಸುರ್ಜಿತ್‌ಗೆ ಈ ಎಲ್ಲ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ದೆಹಲಿ ಪೊಲೀಸರು ಸುರ್ಜಿತ್ ಇರುವ ಸ್ಥಳವನ್ನು ಪತ್ತೆಹಚ್ಚಿ ಆತನ ಬಗ್ಗೆ ವಿಚಾರಿಸಲು ಮೂವರು ಸದಸ್ಯರ ತಂಡವನ್ನು ಲೋನಾರ್‌ಗೆ ಕಳುಹಿಸಿದರು.

ದೆಹಲಿ ಪೊಲೀಸರ ದಾಳಿಯ ಬಗ್ಗೆ ಸುರ್ಜಿತ್ ಸಂಬಂಧಿ ಹೇಳಿದ ನಂತರ, ಆತ ಭಯಭೀತನಾಗಿ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾನೆ ಎಂದು ಹರ್ಪಲ್​​​​​​ಪುರ (ಹಾರ್ಡೊಯ್) ವಲಯ ಅಧಿಕಾರಿ ರಾಕೇಶ್ ವಸಿಷ್ಠ ತಿಳಿಸಿದ್ದಾರೆ.

ಸುರ್ಜಿತನ ಮಾದರಿಯನ್ನು COVID-19 ಪರೀಕ್ಷೆಗೆ ಸಂಗ್ರಹಿಸಲಾಗಿದೆ. ವರದಿ ಬಂದ ನಂತರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.