ನ್ಯೂಸ್

ಮೈತ್ರಿ ಸರ್ಕಾರ ಹೋಗಿದ್ದೇ ಬಂಡೆ ಮಹಾಶಯನಿಂದ ಎಚ್ ಡಿಕೆ ಹೊಸ ಬಾಂಬ್

ಬಿಡದಿ: ದೇವೇಗೌಡರ ಒತ್ತಡಕ್ಕೆ ಮಣಿದು  ನನ್ನ ಜೀವನದಲ್ಲಿ 2018 ರಲ್ಲಿ  ಕಾಂಗ್ರೆಸ್ ಪಕ್ಷದ ಜೊತೆಗೆ ಕೈ ಜೋಡಿಸದೆ ಇದ್ದಿದ್ದರೆ ಇಂದು 19 ಸ್ಥಾನಕ್ಕೆ ಬರುತ್ತಿರಲಿಲ್ಲ 50 ರಿಂದ 60 ಸ್ಥಾನ  ಗೆಲ್ಲುತ್ತಿದ್ದೊ ಎಂದು ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಡದಿಯ ಕೇತುಗಾನಹಳ್ಳಿಯ ತೋಟದ ಮನೆಯಲ್ಲಿ ಕರೆಯಲಾಗಿದ್ದ ಜಿಲ್ಲಾ ಪ್ರಮುಖ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಅಂದು ಕಾಂಗ್ರೆಸ್ ಮೈತ್ರಿಯಿಂದ ನನ್ನ ಕಾರ್ಯಕರ್ತರಿಗೆ ರಕ್ಷಣೆ ಮಾಡಲು ಆಗಲಿಲ್ಲ ಇದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ‌ ಎಂದರು.
ನಡು ರಸ್ತೆಯಲ್ಲಿ ಬಿಟ್ಟು ಹೋದ: ಕನಕಪುರದ ಮಹಾನುಭಾವ ನನ್ನ ಕೈ ಹಿಡದು ಜನರ ಮುಂದೆ ಕೈ ಮೇಲೆತ್ತಿ ಜೋಡೆತ್ತು ಎಂದು ಹೇಳಿದ್ದ ನಾನು ನಂಬಿಬಿಟ್ಟೆ. ಈ ಮಹಾನುಭಾವ  ನಡು ರಸ್ತೆಯಲ್ಲಿ ನಮ್ಮನ್ನ ಬಿಟ್ಟು ಎತ್ತಿನಗಾಡಿ  ಎತ್ತುಗಳನ್ನ ಹೊಡೆದುಕೊಂಡು ಹೋದ . ನನ್ನ ಸರ್ಕಾರ ಹೋಗಿದ್ದೆ ಇದೇ ಕನಕಪುರದ ಬಂಡೆ ಮಹಾಶಯನಿಂದ ಈ ಸತ್ಯ ಜನರಿಗೆ ತಿಳಿಯುತ್ತಿಲ್ಲ ಅಷ್ಟೆ.
ರಮೇಶ್ ಜಾರಕಿಹೊಳಿಗು ನನಗು ಯಾವುದೇ ಕಿತ್ತಾಟ ಇರಲಿಲ್ಲ . ಈ ಕಿತ್ತಾಟ ಇದ್ದಿದ್ದು ಇದೇ ಕನಕಪುರದ ಮಹಾಪುರುಷನೊಂದಿಗೆ .. ಈ ಬಗ್ಗೆ ದೊಡ್ಡ ಕಥೆ ಇದೆ ಈ ವೇದಿಕೆಯಲ್ಲಿ ಚರ್ಚೆ ಬೇಡವಾಗಿದೆ. ಮೇಕೆದಾಟು ಯೋಜನೆ ಬಗ್ಗೆ ದೊಡ್ಡದಾಗಿ ಪಾದಯಾತ್ರೆ ಮಾಡಿಕೊಂಡು ಭರ್ಜರಿ ಬಾಡೂಟ ಮಾಡಕೊಂಡು ಹೋದರಲ್ಲ ಏನ್ ಆಯ್ತು.
ರಾಜ್ಯದ ತುಂಬೆಲ್ಲ ಕುಮಾರಸ್ವಾಮಿ ಅವರಿಗೆ ಪೆನ್ನು ಪೇಪರ್ ಕೊಟ್ಟಿದ್ದೀರಿ ನನಗು ಕೊಡಿ ಅಂತ ಭಾಷಣ ಮಾಡಿದ್ದ ಇದೀಗ ಅಧಿಕಾರ ಕೊಟ್ಟಿದ್ದರಲ್ಲ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು.