ರಾಯಚೂರು: ಕಾಂಗ್ರೆಸ್ ಮತ್ತು ಬಿಜೆಪಿ ಅವರ ಚುನಾವಣಾ ಪ್ರಚಾರಕ್ಕೂ ನಮ್ಮ ಪಕ್ಷದ ಪ್ರಚಾರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪ್ರಜಾ ಧ್ವನಿ ಹೆಸರಿನಲ್ಲಿ ಕಾಂಗ್ರೆಸ್ ಎರಡು ಗುಂಪುಗಳಾಗಿ ಪ್ರಚಾರ ಆರಂಭಿಸಿವೆ. ಅವರು ನಾಡಿನ ಜನತೆಯ, ರೈತರ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅವರಲ್ಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿಂಧನೂರು ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಮತ್ತು ಜೆಡಿಎಸ್ ಭ್ರಷ್ಟಾಚಾರ ಮಾಡುತ್ತಿವೆ, ಬಿಜೆಪಿ ಬೆಂಬಲಿಸಿ ಎಂದು ಅಮಿತ್ ಷಾ ಹೇಳುತ್ತಾರೆ. ಆದರೆ ಎಲ್ಲೂ ಕೂಡ ನಾಡಿನ ಸಮಸ್ಯೆ ಬಗ್ಗೆ ಮಾತನಾಡುವುದಿಲ್ಲ. ಡಬಲ್ ಎಂಜಿನ ಸರ್ಕಾರ ರಾಜ್ಯದ ಜನತೆಗೆ ಏನು ಕೊಡುಹೆ ಕೊಟ್ಟಿದ್ದೇವೆ ಎಂಬುದು ನಾಡಿನ ಜನತೆ ಮುಂದೆ ಪ್ರಸ್ತಾಪಿಸಲಿ ಎಂದು ಸವಾಲು ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ಗೆ ನೆಲೆ ಇಲ್ಲವೆಂದು ಸಿದ್ದರಾಮಯ್ಯ ಹೇಳುತ್ತಾರೆ. ಇದನ್ನು ಮತದಾರರು ನಿರ್ಧರಿಸುತ್ತಾರೆ. ರೈತರ ಪರ ಕಾಳಜಿ ನಮ್ಮ ಪಕ್ಷದ ಸಿದ್ದಾಂತ. ನಾವು ಗೆದ್ದ ಎತ್ತಿನ ಬಾಲ ಹಿಡಿಯುವವರು ಎಂದು ಟೀಕಿಸುತ್ತಾರೆ. ಆದರೆ ರಾಷ್ಟ್ರೀಯ ಪಕ್ಷಗಳು ಸೋತ ಎತ್ತಿನ ಬಾಲ ಹಿಡಿದುಕೊಂಡು ಬರುತ್ತಾರೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.