ರಾಮನಗರ: ರಾಜ್ಯದ ಕೆಟ್ಟ ಸರ್ಕಾರವನ್ನು ತೆಗೀಬೇಕು. ಈ ಹಿನ್ನೆಲೆಯಲ್ಲಿ ನಮಗೂ ಶಕ್ತಿ ಬೇಕಿದೆ ಇದಕ್ಕಾಗಿ ಮೈತ್ರಿ ಅಗತ್ಯವಿದೆ. ಈ ಬಗ್ಗೆ ಚರ್ಚಿಸಲು ಇದೇ 21ಕ್ಕೆ ದೆಹಲಿಗೆ ಹೋಗುತ್ತಿರುವುದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಬಗ್ಗೆ ಚರ್ಚೆ ನಡೆದಿದೆ ಆದರೆ ಸ್ಥಾನಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ಸರ್ಕಾರ ತಗಿಬೇಕು ಅದಕ್ಕೆ ಮೈತ್ರಿ ಆಗುತ್ತಿದ್ದೇವೆ. ಆಗಂತ ಸರ್ಕಾರ ಬೀಳಿಸುವ ಕಾರ್ಯವಲ್ಲ ನಮಗೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಶಕ್ತಿ ಬೇಕಾಗಿದೆ ಈ ಹಿನ್ನೆಲೆಯಲ್ಲಿ ಮೈತ್ರಿ ಅಗತ್ಯ ಎಂದರು
ಚನ್ನಪಟ್ಟಣ ತಾಲೂಕಿನಲ್ಲಿ ಸಂಸದ ಸುರೇಶ್ ನಡೆಸುತ್ತಿರುವ ಜನಸಂಪರ್ಕ ಸಭೆಗೂ ಆಕ್ಷೇಪ ವ್ಯಪ್ತಡಿಸಿದ ಕುಮಾರಸ್ವಾಮಿ, ಲೋಕಸಭಾ ಸದಸ್ಯನ ಕೆಲಸ ಎನು ಎಂದು ಮೊದಲು ತಿಳಿದುಕೊಳ್ಳಲಿ. ಅವರಿಗೆ ದಿಶಾ ಸಭೆ ನಡೆಸಲು ಮಾತ್ರ ಅಧಿಕಾರ ಇದೆ. ಆದರೆ ಅಧಿಕಾರಿಗಳನ್ನು ಕರೆದುಕೊಂಡು ಸಭೆಗೆ ಹೋಗುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದ್ದು, ಹಕ್ಕುಚ್ಯುತಿ ತರುವುದಾಗಿ ಹೇಳಿದರು.
ಮೆಡಿಕಲ್ ಕಾಲೇಜು ರಾಮನಗರಕ್ಕೆ ಅಗತ್ಯವಿದೆ, ಕನಕಪುರಕ್ಕೆಅಲ್ಲ. ನಾನು ಸಿಎಂ ಆಗಿದ್ದ ಅವಧಿಯಲ್ಲಿ 100 ಕೋಟಿ ಕೊಟ್ಟಿದ್ದೆ. ಅದರಲ್ಲಿ ಬೇಕಾದರೆ ಮಾಡಿಕೊಳ್ಳಲಿ, ಅದು ಬಿಟ್ಟು ರಾಮನಗರದಲ್ಲಿ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋದರೆ ಸುಮ್ಮನೆ ಕೂರುವುದಿಲ್ಲ. ಮೆಡಿಕಲ್ ಕಾಲೇಜು ಇಲ್ಲೇ ಆಗಬೇಕು ಎಂದರು. ಈಗ ಕನಕಪುರದಲ್ಲಿ ಯಾವುದೋ ಆಸ್ತಿ ಜಿಪಿಎ ಹಾಕಿಕೊಂಡಿದ್ದು ಈಗ ಮೆಡಿಕಲ್ ಕಾಲೇಜು ಹೆಸರಲ್ಲಿ ಹಣ ಮಾಡಲು ಯೋಜಿಸಿದಂತೆ ಇದೆ ಆರೋಪಿಸಿದರು.
ಸಂಸತ್ ನಲ್ಲಿ ಪ್ರಧಾನಿ ಅವರು ಮಹಿಳಾ ಮೀಸಲಾತಿ ತರಲು ಹೊರಟಿರುವ ಕ್ರಮವನ್ನು ಎಚ್ ಡಿಕೆ ಸ್ವಾಗತಿಸಿದರು. ದೇವೇಗೌಡರು 96-97 ರಲ್ಲಿ ಸಿಎಂ ಆಗಿದ್ದಾಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಥಾನ ಕಲ್ಪಿಸಿದ್ದರು. ಲೋಕಸಭೆಯಲ್ಲಿ ಮಂಡನೆಗೆ ತರಬೇಕು ಎಂದು ತಂದಿದ್ದರು. ಸುಮಾರು 27 ವರ್ಷಗಳ ನಂತರ ಇದು ಮಂಡನೆ ಆಗುತ್ತಿರುವುದು ಸಂತಸದ ವಿಚಾರ ಎಂದರು.