ಸಾಂದರ್ಭಿಕ ಚಿತ್ರ 
ನ್ಯೂಸ್

ಎರಡು ಎಫ್‌ಐಆರ್ ರದ್ದುಗೊಳಿಸಿ 400 ಮರ ನೆಡಲು ಸೂಚನೆ ನೀಡಿದ ಹೈಕೋರ್ಟ್

ದೆಹಲಿ: ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ಎರಡು ಎರಡು ಕುಟುಂಬಗಳ ನಡುವಿನ ಜಗಳದ ಕುರಿತು ದಾಖಲಾಗಿದ್ದ ಎರಡು ಎಫ್‌ಐಆರ್‌ಗಳನ್ನು ರದ್ದುಗೊಳಿಸಿ, ತಮ್ಮ ಪ್ರದೇಶದಲ್ಲಿ 400 ಸಸಿಗಳನ್ನು ನೆಡುವಂತೆ ನ್ಯಾಯಾಲಯ ಸೂಚನೆ ನೀಡಿದೆ.

ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು, ಗಾಯವನ್ನು ಉಂಟು ಮಾಡುವ ಪ್ರಯತ್ನ, ಮನೆ ಅತಿಕ್ರಮಣ, ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ತಪ್ಪಿತಸ್ಥ ನರಹತ್ಯೆಗೆ ಯತ್ನದಡಿ ದಾಖಲಾಗಿದ್ದ ಎರಡು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯ ರದ್ದುಗೊಳಿಸಿದ್ದು, ಎರಡು ಕುಟುಂಬಗಳ ಸದಸ್ಯರು ತಮ್ಮ ಪ್ರದೇಶದಲ್ಲಿ 400 ಸಸಿಗಳನ್ನು ನೆಟ್ಟು ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಅವರ ನಕಾರಾತ್ಮಕ ಆಲೋಚನೆ ಕೊನೆಗೊಳಿಸುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ಇದನ್ನೂ ಓದಿ: ಯುವಕನನ್ನು ಸ್ಕೂಟಿ ಹಿಂದೆ ಕಟ್ಟಿ ಎಳೆದೊಯ್ದ ಪುಂಡರು: ಸಿಸಿಟಿವಿಯಲ್ಲಿ ಭೀಕರ ಕೃತ್ಯ ಸೆರೆ

ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರು, ಸಮಾಜಕ್ಕೆ ಕೊಡುಗೆ ನೀಡುವಂತೆ ಎರಡು ಪಕ್ಷಗಳಿಗೆ ನಿರ್ದೇಶನ ನೀಡುವ ಮೂಲಕ ಅವರ ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಎರಡೂ ಪ್ರಕರಣಗಳಲ್ಲಿ, ಅರ್ಜಿದಾರರಿಗೆ ಆಯಾ ಪ್ರದೇಶಗಳಲ್ಲಿ ತಲಾ 200 ಮರಗಳನ್ನು ನೆಡಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ತನಿಖಾಧಿಕಾರಿಯು (ಐಒ) ತೋಟಗಾರಿಕೆ ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ಸಸಿ ನೆಡಲು ಸ್ಥಳವನ್ನು ಗುರುತಿಸಿ, ಅರ್ಜಿದಾರರಿಗೆ 15 ದಿನಗಳ ಮುಂಚಿತವಾಗಿ ತಿಳಿಸುತ್ತಾರೆ. ಅನಂತರ ಅರ್ಜಿದಾರರು ಸಸಿಗಳನ್ನು ನೆಡಬೇಕು. ಈ ಕುರಿತು ತನಿಖಾಧಿಕಾರಿಗಳು ಸೂಕ್ತ ಪ್ರಾಧಿಕಾರದಿಂದ, ಇವುಗಳ ಮೇಲ್ವಿಚಾರಣೆಗಾಗಿ ಸಸ್ಯಗಳಿಗೆ ಜಿಯೋ ಟ್ಯಾಗ್ ಮಾಡಿಸಿ ಮಾನಿಟರ್​​ ಮಾಡುತ್ತಾರೆ.ಅಲ್ಲದೇ, ಈ ಕುರಿತು ನವೆಂಬರ್‌ನಲ್ಲಿ ಈ ವಿಷಯದ ಅನುಸರಣೆ ವರದಿಯನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

2017ರ ಮಾರ್ಚ್ 4ರಂದು ರಾಜಕೀಯ ಪಕ್ಷದ ಪರವಾಗಿ ಮೂವರು ಮನೆಯೊಂದಕ್ಕೆ ತೆರಳಿ, ತಾವು ಕಂಬಳಿ ನೀಡುವ ಸಲುವಾಗಿ ಬಂದಿದ್ದು ಮನೆಯ ಸದಸ್ಯರ ಐಡಿಗಳನ್ನು ಕೇಳಿದಾಗ ಮನೆಯವರು ಅವರಿಗೆ ತಾವು ಬೇರೆ ರಾಜಕೀಯ ಪಕ್ಷದ ಬೆಂಬಲಿಗರು ಎಂದು ಮೂವರಿಗೂ ತಿಳಿಸಿದ್ದು, ಮಾತಿನ ಚಕಮಕಿ ನಡೆದು ನಂತರ ಮಾರಾಮಾರಿ ನಡೆದು ಈ ಕುರಿತು ಪ್ರಕರಣ ದಾಖಲಾಗಿತ್ತು. ಕೊನೆಗೆ ಎರಡೂ ಕಡೆಯವರು ಕಳೆದ ಜನವರಿಯಲ್ಲಿ ಯಾವುದೇ ಭಯ, ಬಲ ಅಥವಾ ದಬ್ಬಾಳಿಕೆಯಿಲ್ಲದೆ ಸ್ವಯಂಪ್ರೇರಿತವಾಗಿ ವಿಷಯವನ್ನು ಇತ್ಯರ್ಥಗೊಳಿಸಲು ಬಯಸುತ್ತೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.(ಏಜೆನ್ಸೀಸ್​)