ಅಕ್ಷಯ್ ಕುಮಾರ್ 
ನ್ಯೂಸ್

ಅಕ್ಷಯ್‌ಗೆ ಧಮಾಕಾ : ‘ವೆಲ್ಕಂ ಟು ದ ಜಂಗಲ್’ ಬಿಡುಗಡೆ ಬೆನ್ನಲ್ಲೇ ‘ಹೈವಾನ್’ ರಿಲೀಸ್ ಡೇಟ್ ಅನೌನ್ಸ್

ಪ್ರಮುಖ ಮುಖ್ಯಾಂಶಗಳು

  • ಅಕ್ಷಯ್ ಕುಮಾರ್ ನಟನೆಯ ಎರಡು ಸಿನಿಮಾ ರಿಲೀಸ್ ಬೆನ್ನಲ್ಲೇ ಮತ್ತೊಂದು ಚಿತ್ರದ ರಿಲೀಸ್ ಡೇಟ್ ಅನೌನ್ಸ್​
  • ಸೆ.11ಕ್ಕೆ ಹಿಂದಿಯ ಹೈವಾನ್ ರಿಲೀಸ್ ಗೆ ಸಿದ್ಧ
  • ಸತತ ಸೋಲಿನಿಂದ ಕಂಗೆಟ್ಟಿದ ಅಕ್ಷಯ್ ಕುಮಾರ್ ಗೆಲುವಿನ ನಗೆ
ಕಳೆದ ವರ್ಷಕ್ಕಿಂತ 2026 ಬಾಲಿವುಡ್ ನಟ ಅಕ್ಷಯ್ ಕುಮಾರ್ ಶುಭದಾಯಕವಾಗಿದೆ. ನಿರಂತರ ಸೋಲಿನಿಂದ ಕಂಗೆಟ್ಟಿದ್ದ ನಟಿನಿಗೆ ಈ ವರ್ಷ ಚೈತನ್ಯ ಹೆಚ್ಚಿಸಿದೆ. ಕಳೆದ ಏ.17ರಂದು ರಿಲೀಸ್ ಆಗಿದ್ದ ನಟನ ‘ಭೂತ್ ಬಂಗ್ಲಾ’ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ, ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಪ್ರೇಕ್ಷಕರನ್ನು ನಗಿಸುವುದಲ್ಲದೇ ತಾವು ಬಾಕ್ಸಾಫೀಸ್‌ನಲ್ಲಿ ಗೆಲುವಿನ ನಗೆ ಬೀರಿದ್ದರು. ಈ ಸಿನಿಮಾ ತೆರೆಕಂಡು ಎರಡು ತಿಂಗಳ ಗ್ಯಾಪ್‌ನಲ್ಲಿಯೇ ಅಕ್ಷಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಅದುವೇ ‘ವೆಲ್ಕಂ ಟು ದ ಜಂಗಲ್’. ಇದೇ ಜೂನ್ 26ಕ್ಕೆ ತೆರೆಕಂಡಿರುವ ಕಾಮಿಡಿ ಡ್ರಾಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳು ಗೆಲುವಿನಲ್ಲಿರುವ ಅಕ್ಷಯ್ ಕುಮಾರ್‌ಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ಅವರ ನಟನೆಯ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಹಿರಿಯ ನಿರ್ದೇಶಕ ಪ್ರಿಯದರ್ಶನ್ ಹಾಗೂ ಅಕ್ಷಯ್ ಕುಮಾರ್ ಕಾಂಬಿನೇಷನ್‌ನಲ್ಲಿ ‘ಹೈವಾನ್’ ಸಿನಿಮಾ ಕಳೆದ ವರ್ಷ ಸೆಟ್ಟೇರಿತ್ತು. ಇನ್ನು ಈ ಚಿತ್ರವನ್ನು ನಿರ್ಮಿಸುವ ಮೂಲಕ ಕನ್ನಡದ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಬಾಲಿವುಡ್ ಪ್ರವೇಶಿಸಿತ್ತು. ಇದೀಗ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಾಗಿದೆ. ಇದೇ ಸೆಪ್ಟೆಂಬರ್ 11ರಂದು ‘ಹೈವಾನ್’ ತೆರೆಗೆ ಬರಲಿದೆ. ಅಕ್ಷಯ್ ಜತೆಗೆ ಸೈಫ್ ಅಲಿ ಖಾನ್, ಸಯ್ಯಮಿ ಕೇರ್, ಶ್ರೀಯಾ ಕಲಾ ಬಳಗದಲ್ಲಿದ್ದಾರೆ. ಇನ್ನು ‘ಹೈವಾನ್’ ತೆರೆಗೆ ಬರುವ ದಿನವೇ ತೆಲುಗಿನ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಅಭಿನಯದ ‘ರಣಬಾಲಿ’ ರಿಲೀಸ್ ಆಗಲಿದ್ದು, ಈ ಮೂಲಕ ಬಾಕ್ಸಾಫೀಸ್‌ನಲ್ಲಿನ ಕ್ಲ್ಯಾಷ್ ಆಗಲಿದೆ. -ಏಜೆನ್ಸೀಸ್